ADVERTISEMENT

ನಿಮ್ಮ ಪಕ್ಷದ ರೌಡಿ ಹಿನ್ನೆಲೆ ಬಗ್ಗೆ ಉತ್ತರಿಸಿ: ಬಿಜೆಪಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 2:33 IST
Last Updated 7 ಡಿಸೆಂಬರ್ 2022, 2:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರೌಡಿ ವಿಷಯವಾಗಿ ಕಾಂಗ್ರೆಸ್‌ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಚರ್ಚೆಯನ್ನು ಮುಂದುವರೆಸುವ ಮುನ್ನ ಇಬ್ಬರೂ ಮುಖಂಡರು ಕೆಳಕಂಡ ಪ್ರಶ್ನೆಗಳಿಗೆ ಉತ್ತರಿಸುವಂತೆ ಬಿಜೆಪಿ ರಾಜ್ಯ ಪ್ರಧಾನ
ಕಾರ್ಯದರ್ಶಿ ಎನ್‌.ರವಿಕುಮಾರ್‌ ಸವಾಲು ಹಾಕಿದ್ದಾರೆ.

*ದೇವರಾಜ ಅರಸು ಕಾಲದಲ್ಲಿ ಅಂದಿನ ಭೂಗತ ರೌಡಿಗಳ ಜತೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ಕುಳಿತು ಪೊಲೀಸರಿಂದ ಎಳನೀರು ತರಿಸಿಕೊಳ್ಳುತ್ತಿದ್ದವರು ಯಾವ ಪಕ್ಷದಲ್ಲಿದ್ದರು?

*ಯಾರೋ ಕೆಲವರು ಕಾಂಗ್ರೆಸ್‌ ಪಕ್ಷದ ಬ್ಯಾನರ್‌ ಹರಿದು ಹಾಕಿದಾಗ, ರಾಜ್ಯದಲ್ಲಿ ಬಿಜೆಪಿಯವರಿಗೆ ಒಂದೂ ಕಾರ್ಯಕ್ರಮ ಮಾಡಲು ಬಿಡುವುದಿಲ್ಲ ಎಂದು ಬೀದಿ ರೌಡಿಯ ರೀತಿ ಬೆದರಿಕೆ ಹಾಕಿದ್ದು ಯಾವ ಸಂಸ್ಕೃತಿ ?

ADVERTISEMENT

*ಟಿಪ್ಪು ಕುರಿತು ನಿಮ್ಮ (ಸಿದ್ದರಾಮಯ್ಯ) ಕುರುಡು ಪ್ರೇಮವನ್ನು ಖಂಡಿಸಿ, ಕೊಡಗಿನ ಜನ ನಿಮ್ಮ ಕಾರಿಗೆ ಕಲ್ಲು ಹೊಡೆದಾಗ ಅದಕ್ಕೆ ಪ್ರತೀಕಾರವಾಗಿ ಇಡೀ ರಾಜ್ಯಕ್ಕೆ ಬೆಂಕಿ ಹಚ್ಚುತ್ತೇವೆ ಎಂದು ಹೇಳಿದ್ದು ರೌಡಿ ಸಂಸ್ಕೃತಿಯ ಲಕ್ಷಣವಲ್ಲವೇ?

*ಪ್ರತಿಭಟನೆ ಮಾಡಲು ಬಂದರೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚುತ್ತೇನೆ ಎಂದು ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಹೇಳಿದ್ದು, ತಾವು ಓದಿರುವ ಪ್ರಜಾಪ್ರಭುತ್ವದ ಯಾವ ಹಾಳೆಯಲ್ಲಿದೆ?

*ಮಂಗಳೂರಿನ ಟಾರ್ಗೆಟ್‌ ಗ್ರೂಪ್‌ನ ರೌಡಿ ಇಲ್ಯಾಸ್‌, ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯ ಅಲ್ಲವೇ? ಮೂಡು ಬಿದರೆ ಟಿಕೆಟ್‌ ಆಕಾಂಕ್ಷಿ ಮಿಥುನ್ ರೈ ಹಿನ್ನೆಲೆ ಏನು?

*ಕಾಂಗ್ರೆಸ್‌ನ ಮಾಜಿ ಕಾರ್ಪೊರೇಟರ್‌ ಕೆ.ಎಸ್‌.ಸಮೀವುಲ್ಲಾ ಅವರ ಹಿನ್ನೆಲೆ ಏನು? ಕೆಪಿಸಿಸಿ ಕಾರ್ಮಿಕ ವಿಭಾಗದ ಸದಸ್ಯ ಅಲ್ತಾಫ್‌ ಖಾನ್‌ ರೌಡಿಶೀಟರ್ ಎನ್ನುವುದು ಗೊತ್ತಿಲ್ಲವೆ? ಮಾಜಿ ಶಾಸಕ ಆರ್‌.ವಿ.ದೇವರಾಜ್‌ ಜತೆ ರೌಡಿ ಶೀಟರ್‌ಗಳು ಪೋಸ್‌ ಕೊಟ್ಟು ಅವರ ಕ್ಷೇತ್ರದಲ್ಲಿ ಪೋಸ್ಟರ್‌ ಅಂಟಿಸಿಕೊಂಡಿದ್ದು ಯಾವ ಕಾರಣಕ್ಕೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.