ADVERTISEMENT

ಬೆಲ್ಲದ ಕರೆ ಕದ್ದಾಲಿಕೆ: ವಿಚಾರಣಾಧಿಕಾರಿ ದಿಢೀರ್ ಬದಲು

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 20:46 IST
Last Updated 23 ಜೂನ್ 2021, 20:46 IST
ಅರವಿಂದ ಬೆಲ್ಲದ
ಅರವಿಂದ ಬೆಲ್ಲದ   

ಬೆಂಗಳೂರು: ಶಾಸಕ ಅರವಿಂದ ಬೆಲ್ಲದ ಅವರ ಕರೆ ಕದ್ದಾಲಿಕೆ ಮಾಡಿರುವ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಅಧಿಕಾರಿಯನ್ನು ದಿಢೀರ್‌ ಬದಲಾಯಿಸಲಾಗಿದೆ.

ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಕಬ್ಬನ್‌ ಪಾರ್ಕ್‌ ಠಾಣೆಯಎಸಿಪಿ ಯತಿರಾಜ್ ಅವರ ಸ್ಥಾನಕ್ಕೆ ಶೇಷಾದ್ರಿಪುರ ಉಪವಿಭಾಗದ ಎಸಿಪಿ ಎಂ.ಜೆ.ಪೃಥ್ವಿ ಅವರನ್ನು ನಿಯೋಜಿಸಿ, ವಿಚಾರಣೆಯ ಹೊಣೆಗಾರಿಕೆ ನೀಡಲಾಗಿದೆ.

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಡೆದಿದ್ದ ಕರೆಗಳ ಕದ್ದಾಲಿಕೆ ಪ್ರಕರಣದಲ್ಲಿ ಯತಿರಾಜ್ ಅವರನ್ನು ಸಿಬಿಐ ವಿಚಾರಣೆ ನಡೆಸಿತ್ತು. ಕರೆ ಕದ್ದಾಲಿಕೆಗೆ ಸಹಕರಿಸಿದ್ದ ಆರೋಪವೂ ಯತಿರಾಜ್‌ ಅವರ ಮೇಲಿತ್ತು. ಈ ಕಾರಣದಿಂದಲೇ ವಿಚಾರಣಾಧಿಕಾರಿಯನ್ನು ಬದಲಿಸಲಾಗಿದೆ ಎನ್ನಲಾಗಿದೆ.

ADVERTISEMENT

ಬೆಲ್ಲದಗೆ ನೋಟಿಸ್: ‘ವಿಚಾರಣೆಗೆ ಬರುವಂತೆ ಬೆಲ್ಲದ ಅವರಿಗೆ ನೋಟಿಸ್‌ ಜಾರಿ ಮಾಡಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ತನಿಖೆಗೆ ಸಂಪೂರ್ಣ ಸಹಕಾರ: ‘ಕರೆ ಕದ್ದಾಲಿಕೆ ಆಗಿರುವಬಗ್ಗೆ ಗೃಹ ಇಲಾಖೆಗೆ ಸಲ್ಲಿಸಿದ್ದ ದೂರಿನನ್ವಯ ತನಿಖೆ ನಡೆಯುತ್ತಿದ್ದು, ಇದಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದ್ದೇನೆ. ಆದರೆ, ನಾನು ದೂರು ಹಿಂಪಡೆಯುತ್ತಿದ್ದೇನೆ ಎಂಬ ವದಂತಿ ಹರಿದಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಅದು ಸತ್ಯಕ್ಕೆ ದೂರ.ಸಂಪೂರ್ಣ ತನಿಖೆಯಾಗಿ ಸತ್ಯ ಹೊರಬರಬೇಕಿದೆ’ ಎಂದು ಅರವಿಂದ ಬೆಲ್ಲದ ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.