ADVERTISEMENT

ವಿಧಾನಸಭೆ ಚುನಾವಣೆ ಯಾವಾಗ ಬೇಕಾದರೂ ಬರಬಹುದು: ಕಾಂಗ್ರೆಸ್‌ ಮುಖಂಡ ಜಿ. ಪರಮೇಶ್ವರ್

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 9:13 IST
Last Updated 8 ಫೆಬ್ರುವರಿ 2020, 9:13 IST
   

ಹುಬ್ಬಳ್ಳಿ: ಸಂಪುಟ ವಿಸ್ತರಣೆ ವೇಳೆ ಬಿಜೆಪಿಯಲ್ಲಿ ಒಳ ಬೇಗುದಿ ಬಯಲಾಗಿದ್ದು ಇಂದಿನಿಂದಅಸಲಿ ಜಗಳ ಶುರುವಾಗಲಿದೆ ಎಂದು ಕಾಂಗ್ರೆಸ್‌ ಮುಖಂಡ ಹಾಗೂಶಾಸಕ ಜಿ. ಪರಮೇಶ್ವರ್ ಹೇಳಿದ್ದಾರೆ.

ಇಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಪಕ್ಷದ ಹಿರಿಯರು ಅಸಮಾಧಾನಗೊಂಡಿದ್ದಾರೆ. ಕೆಲವರು ಬಹಿರಂಗವಾಗಿಯೇ ತಮ್ಮ ಬೇಸರ ತೋಡಿಕೊಂಡಿದ್ದಾರೆ ಎಂದರು.ಸಂಪುಟ ವಿಸ್ತರಣೆಗೆ ಇಷ್ಟು ದಿನ ಬೇಕಾಯಿತು. ಆದರೂ, ಇನ್ನೂ ಖಾತೆ ಹಂಚಿಕೆಯಾಗಿಲ್ಲ. ಬಿಜೆಪಿಯ ಸದ್ಯದ ಸ್ಥಿತಿ ನೋಡಿದರೆ, ವಿಧಾನಸಭೆ ಚುನಾವಣೆ ಯಾವಾಗ ಬೇಕಾದರೂ ಬರಬಹುದು ಎಂದುಪರಮೇಶ್ವರ್ ಅಭಿಪ್ರಾಯಪಟ್ಟರು.

ADVERTISEMENT

ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸದ್ಯದಲ್ಲೇ ಆಯ್ಕೆ ನಡೆಯಲಿದೆ ಎಂದ ಅವರು, ಪಕ್ಷದೊಳಗೆ ಮೂಲ ಕಾಂಗ್ರೆಸ್‌ ಮತ್ತು ವಲಸಿಗರು ಎಂಬ ಭೇದ ಭಾವ ಇಲ್ಲ ಎಂದರು.ಒಮ್ಮೆ ನಮ್ಮ‌ ಪಕ್ಷದ ತತ್ವ ಒಪ್ಪಿಕೊಂಡು ಬಂದವರು ನಮ್ಮ ಪಕ್ಷದವರೇ ಆಗುತ್ತಾರೆ.ಒಂದೊಮ್ಮೆ ನಾವು ವಲಸಿಗ ಅನ್ನೋ ಭಾವನೆ ನಮ್ಮಲ್ಲಿ ಇದ್ರೆ ಅವರಿಗೆ ಅಧಿಕಾರ ನೀಡುತ್ತಿರಲಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.