ADVERTISEMENT

ಸುಧಾಮೂರ್ತಿ ಹೊಸ ಪುಸ್ತಕ ಆಡಿಯೊ ಮಾದರಿಯಲ್ಲಿ

ಪಿಟಿಐ
Published 19 ಏಪ್ರಿಲ್ 2020, 20:15 IST
Last Updated 19 ಏಪ್ರಿಲ್ 2020, 20:15 IST
ಸುಧಾಮೂರ್ತಿ
ಸುಧಾಮೂರ್ತಿ   

ನವದೆಹಲಿ: ಲೇಖಕಿ ಸುಧಾಮೂರ್ತಿ ಅವರ ನೂತನ ಪುಸ್ತಕ ‘ಹೌ ದ ಆನಿಯನ್‌ ಗಾಟ್ ಇಟ್ಸ್ ಲೇಯರ್ಸ್‌’ ಕೃತಿ ಈಗ ಡಿಜಿಟಲ್‌ ಮತ್ತು ಧ್ವನಿಸುರುಳಿ ರೂಪದಲ್ಲಿ ಬರಲಿದೆ.

ಲಾಕ್‌ಡೌನ್‌ನ ಈ ಅವಧಿಯಲ್ಲಿ ನೂತನ ಪುಸ್ತಕವು ಮಕ್ಕಳಿಗೆ ಕಲಿಕೆಯ ಜೊತೆಗೆ ಹೊಸ ಅನುಭವವನ್ನು ನೀಡಲಿದೆ ಎಂದು ಅವರು ಆಶಿಸಿದ್ದಾರೆ.

ಈರುಳ್ಳಿಗೆ ಅನೇಕ ಪದರಗಳು ಏಕೆ, ಅದನ್ನು ಕತ್ತರಿಸಿದಾಗ ಕಣ್ಣೀರು ಬರುವುದು ಏಕೆ ಎಂಬುದು ಸೇರಿ ಅನೇಕ ಪ್ರಶ್ನೆಗಳಿಗೆ ಕೃತಿ ಉತ್ತರ ನೀಡಲಿದೆ. ಪೂರಕ ಚಿತ್ರಗಳನ್ನು ಒಳಗೊಂಡಿರುವ ಈ ಕೃತಿ ಇ–ಬುಕ್ ಮಾದರಿಯಲ್ಲಿಯೂ ದೊರೆಯಲಿದೆ ಎಂದು ಪ್ರಕಾಶನ ಸಂಸ್ಥೆ ಪಫಿನ್‌ ತಿಳಿಸಿದೆ.

ADVERTISEMENT

‘ಹೌ ದ ಸೀ ಬಿಕೇಮ್‌ ಸಾಲ್ಟಿ’ ಕೃತಿಯ ನಂತರ ವಿವಿಧ ಅಧ್ಯಾಯಗಳನ್ನು ಒಳಗೊಂಡ ಸುಧಾಮೂರ್ತಿ ಅವರ ಎರಡನೇ ಕೃತಿ ಇದಾಗಿದೆ.ಧ್ವನಿಸುರುಳಿ ರೂಪದಲ್ಲಿ ಪ್ರಥಮ ಬಾರಿಗೆ ಬರುತ್ತಿರುವ ಈ ಕೃತಿ, ವಿಶ್ವ ಪುಸ್ತಕ ದಿನವಾದ ಏ. 23ರಂದು ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.