ADVERTISEMENT

ಕೆಎಸ್‌ಆರ್‌ಟಿಸಿ ‘ಅಂಬಾರಿ ಡ್ರೀಮ್ ಕ್ಲಾಸ್’ ಸೇವೆಗೆ ಅಂತರರಾಷ್ಟ್ರೀಯ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 5:06 IST
Last Updated 16 ಆಗಸ್ಟ್ 2019, 5:06 IST
ಕೆಎಸ್‌ಆರ್‌ಟಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಅವರು ಸಿಂಗಪುರದಲ್ಲಿ ಪ್ರಶಸ್ತಿ ಸ್ವೀಕರಿಸಿದರು.
ಕೆಎಸ್‌ಆರ್‌ಟಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಅವರು ಸಿಂಗಪುರದಲ್ಲಿ ಪ್ರಶಸ್ತಿ ಸ್ವೀಕರಿಸಿದರು.   

ಬೆಂಗಳೂರು: ಕೆಎಸ್‌ಆರ್‌ಟಿಸಿಯ ‘ಅಂಬಾರಿ ಡ್ರೀಮ್ ಕ್ಲಾಸ್’ ಬಸ್ ಸೇವೆಗೆ ಅಂತರರಾಷ್ಟ್ರೀಯ ಸಿಎಂಒ ಏಷ್ಯಾ ಸಂಸ್ಥೆಯ ಬ್ರಾಂಡಿಂಗ್ ಎಕ್ಸಲೆನ್ಸ್ ಪ್ರಶಸ್ತಿ ಲಭಿಸಿದೆ.

ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಅವರು ಸಿಂಗಪುರದಲ್ಲಿ ಪ್ರಶಸ್ತಿ ಸ್ವೀಕರಿಸಿದರು.

ಸಿಎಂಒ ಏಷ್ಯಾದ ಜಾಗತಿಕ ಮಟ್ಟದ ಬ್ರಾಡಿಂಗ್ ಕ್ಷೇತ್ರದ ಜಾಲವಾಗಿದೆ. ಬ್ರಾಡಿಂಗ್ ಕ್ಷೇತ್ರದಲ್ಲಿ ಉನ್ನತ ಮಟ್ಟದ ಜ್ಞಾನ ವಿನಿಮಯ ನಾಯಕತ್ವದ ವೇದಿಕೆಯಾಗಿದೆ. ಬ್ರಾಂಡ್ ಪಾಲಕರು ಮತ್ತು ಸೃಜನಶೀಲ ನಾಯಕತ್ವವನ್ನು ಪ್ರೋತ್ಸಾಹಿಸಿ, ಗುರುತಿಸುವ ವ್ಯವಸ್ಥೆ ಇದಾಗಿದೆ.

ADVERTISEMENT
ಸಂಗ್ರಹ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.