ADVERTISEMENT

ಸತೀಶ ಜಾರಕಿಹೊಳಿ ಮುಗಿಸಲು ನಾನ್ಯಾರು?: ಶ್ರೀರಾಮುಲು ತಿರುಗೇಟು

​ಪ್ರಜಾವಾಣಿ ವಾರ್ತೆ
Published 23 ಜನವರಿ 2025, 16:03 IST
Last Updated 23 ಜನವರಿ 2025, 16:03 IST
ಶ್ರೀರಾಮುಲು 
ಶ್ರೀರಾಮುಲು    

ಬಳ್ಳಾರಿ: ‘ಸತೀಶ ಜಾರಕಿಹೊಳಿ ಅವರನ್ನು ಮಟ್ಟಹಾಕಲು ನನ್ನನ್ನು ಡಿ.ಕೆ ಶಿವಕುಮಾರ್‌ ಬಳಸಿಕೊಳ್ಳುತ್ತಿದ್ದಾರೆ ನಾನು ಕಾಂಗ್ರೆಸ್ ಸೇರುತ್ತೇನೆ ಎಂಬುದು ಜನಾರ್ದನ ರೆಡ್ಡಿ ಅವರ ಊಹೆ. ಅವರನ್ನು ಮಟ್ಟ ಹಾಕಲು ನಾನು ಯಾರು’ ಎಂದು ಮಾಜಿ ಸಚಿವ ಶ್ರೀರಾಮುಲು ಪ್ರಶ್ನಿಸಿದರು.

ನಗರದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ‘ಒಂದು ಊರಿನ ರಾಜ ಇನ್ನೊಂದು ಊರಿನ ಗುಲಾಮ. ಸತೀಶ ಜಾರಕಿಹೊಳಿಗೆ ತೊಂದರೆ ಕೊಡುವಷ್ಟು ನಾನು ಸಣ್ಣವನಲ್ಲ; ನಾನೂ ದೊಡ್ಡ ನಾಯಕನೇ. ನಾನೀಗ ಸೋತಿದ್ದೇನೆ. ಕಾಂಗ್ರೆಸ್‌ಗೆ ನನ್ನ ಅಗತ್ಯವೇನಿದೆ?  ಬಿಜೆಪಿಯಲ್ಲಿದ್ದೇನೆ ಇಲ್ಲಿಯೇ ಮುಂದುವರಿಯುತ್ತೇನೆ’ ಎಂದರು.

‘ಪಕ್ಷದಲ್ಲಿ ನಡೆದ ಬೆಳವಣಿಗೆಯಿಂದ ನನಗೆ ನೋವು ಆಗಿದ್ದಕ್ಕೆ ಮಾತನಾಡಿದ್ದೇನೆ. ನಾನು ಕಾಂಗ್ರೆಸ್‌ಗೆ ಹೋಗುತ್ತೇನೆಯೇ ಎಂಬುದರ ಬಗ್ಗೆ ಜನಾರ್ದನ ರೆಡ್ಡಿಯವರೇ ಸ್ಪಷ್ಟನೆ ನೀಡಲಿ. ಅವರು ಸುಳ್ಳಿನ ಮೇಲೆ ಕೋಟೆ ಕಟ್ಟುತ್ತಾರೆ. ಕಾಂಗ್ರೆಸ್‌ನಿಂದ ನನ್ನನ್ನು ಯಾರೂ ಆಹ್ವಾನಿಸಿಲ್ಲ’ ಎಂದು ಅವರು ಹೇಳಿದರು.  

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.