ADVERTISEMENT

‘ಬಾಲಭವನ: ಕಾಯಂ ಸಿಬ್ಬಂದಿ ನೇಮಕಕ್ಕೆ ಪ್ರಸ್ತಾವ’

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 21:53 IST
Last Updated 17 ಫೆಬ್ರುವರಿ 2021, 21:53 IST
ಚಿಕ್ಕಮ್ಮ ಬಸವರಾಜ್
ಚಿಕ್ಕಮ್ಮ ಬಸವರಾಜ್   

ಮಂಗಳೂರು: ರಾಜ್ಯದ 30 ಜಿಲ್ಲೆಗಳಲ್ಲಿರುವ ಬಾಲಭವನಗಳ ಚಟುವಟಿಕೆಗಳನ್ನು ಸಕ್ರಿಯಗೊಳಿಸಲು ಕಾಯಂ ಸಿಬ್ಬಂದಿ ನೇಮಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಬಾಲಭವನ ಸೊಸೈಟಿ ಅಧ್ಯಕ್ಷೆ ಚಿಕ್ಕಮ್ಮ ಬಸವರಾಜ್ ತಿಳಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಾಲಭವನಗಳಲ್ಲಿ ಸದ್ಯ ಕಾರ್ಯಕ್ರಮ ಸಹಾಯಕರು, ಸಂಯೋಜಕರಾಗಿ ತಲಾ ಇಬ್ಬರು ಸಿಬ್ಬಂದಿ ಇದ್ದು, ತಾತ್ಕಾಲಿಕ ಕೆಲಸ ಹಾಗೂ ಕಡಿಮೆ ವೇತನದಿಂದಾಗಿ ಬಹುತೇಕ ಸಿಬ್ಬಂದಿ ಕೆಲಸ ತೊರೆಯುತ್ತಿದ್ದಾರೆ. ಇದರಿಂದ ಸ್ಥಳೀಯ ಮಕ್ಕಳಿಗೆ ಗುಣಮಟ್ಟದ ಚಟುವಟಿಕೆಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ’ ಎಂದರು.

ಈ ನಿಟ್ಟಿನಲ್ಲಿ ಗ್ರೂಪ್ ಡಿ ದರ್ಜೆಯ ಸರ್ಕಾರಿ ವೇತನದಂತೆ ಸಿಬ್ಬಂದಿಯ ಕಾಯಮಾತಿಗೆ ಪ್ರಸ್ತಾವ ಸಲ್ಲಿಸಲಾಗಿದೆ. 10 ಬಾಲಭವನಗಳಿಗೆ ಒಬ್ಬರಂತೆ ಮೂವರು ಅಧಿಕಾರಿಗಳನ್ನು ನಿಯೋಜಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.