ADVERTISEMENT

BAMUL Helpline: ಬಮೂಲ್‌ ಸಹಾಯವಾಣಿ ಆರಂಭ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 15:49 IST
Last Updated 16 ಆಗಸ್ಟ್ 2025, 15:49 IST
   

ಬೆಂಗಳೂರು: ಹಾಲು ಉತ್ಪಾದಕರು, ವಿತರಕರು ಮತ್ತು ಗ್ರಾಹಕರಿಗಾಗಿ ಬಮೂಲ್‌ ಸಹಾಯವಾಣಿಯನ್ನು ಆರಂಭಿಸಿದೆ. 79964 00500 ಸಂಖ್ಯೆಯ ಸಹಾಯವಾಣಿಯು ಆಗಸ್ಟ್‌ 15ರಿಂದಲೇ ಕಾರ್ಯಾರಂಭ ಮಾಡಿದೆ.

ಹಾಲು ಉತ್ಪಾದನೆ, ಪಶು ಆಹಾರ ಲಭ್ಯತೆ–ಕೊರತೆಯ ಬಗ್ಗೆ ರೈತರು–ಹಾಲು ಉತ್ಪಾದಕರು, ಹಾಲು ಪೂರೈಕೆಯಲ್ಲಿನ ಸಮಸ್ಯೆಗಳ ಬಗ್ಗೆ ವಿತರಕರು, ಗುಣಮಟ್ಟ ಮತ್ತು ಇತರ ಸಮಸ್ಯೆಗಳ ಬಗ್ಗೆ ಗ್ರಾಹಕರು ಈ ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಬಹುದು ಎಂದು ಬಮೂಲ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT