ADVERTISEMENT

ಪ್ರಸ್ತಾಪಿತ ಆನವಟ್ಟಿ ತಾಲ್ಲೂಕಿಗೆ ಬನವಾಸಿ: ಸ್ಥಳೀಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 7:11 IST
Last Updated 10 ಅಕ್ಟೋಬರ್ 2019, 7:11 IST
ಬನವಾಸಿಯನ್ನು ಪಕ್ಕದ ಸೊರಬ ತಾಲ್ಲೂಕಿನ ಆನವಟ್ಟಿಗೆ ಸೇರಿಸುವ ಪ್ರಸ್ತಾವ ವಿರೋಧಿಸಿ, ಬನವಾಸಿಯಲ್ಲಿ ಬೃಹತ್ ಪ್ರತಿಭಟನೆ ಆರಂಭವಾಗಿದೆ.
ಬನವಾಸಿಯನ್ನು ಪಕ್ಕದ ಸೊರಬ ತಾಲ್ಲೂಕಿನ ಆನವಟ್ಟಿಗೆ ಸೇರಿಸುವ ಪ್ರಸ್ತಾವ ವಿರೋಧಿಸಿ, ಬನವಾಸಿಯಲ್ಲಿ ಬೃಹತ್ ಪ್ರತಿಭಟನೆ ಆರಂಭವಾಗಿದೆ.   

ಶಿರಸಿ: ಕನ್ನಡದ‌ ಪ್ರಥಮ‌ ರಾಜಧಾನಿ ಬನವಾಸಿಯನ್ನು ಪಕ್ಕದ ಸೊರಬ ತಾಲ್ಲೂಕಿನ ಆನವಟ್ಟಿಗೆ ಸೇರಿಸುವ ಪ್ರಸ್ತಾವ ವಿರೋಧಿಸಿ, ಬನವಾಸಿಯಲ್ಲಿ ಬೃಹತ್ ಪ್ರತಿಭಟನೆ ಆರಂಭವಾಗಿದೆ.

ಬನವಾಸಿ ಹೋಬಳಿಯ 74 ಹಳ್ಳಿಗಳ ಸಾವಿರಾರು ಜನರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಮಧುಕೇಶ್ವರ ದೇವಾಲಯದಿಂದ ಹೊರಟಿರುವ ಮೆರವಣಿಗೆ ಪ್ರಮುಖ‌ ಬೀದಿಗಳಲ್ಲಿ ಸಂಚರಿಸಲಿದೆ.

ಬನವಾಸಿಯನ್ನು ರಕ್ಷಿಸಿ ಎಂದು ಘೋಷಣೆ ಕೂಗುತ್ತ ಸಾರ್ವಜನಿಕರು ಸಾಗುತ್ತಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.