ADVERTISEMENT

ವರಿಷ್ಠರಿಗೆ ಮಣಿದ ಬಸನಗೌಡ: ಪ್ರತಾಪಗೌಡ ದಾರಿ ಸುಗಮ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 15:18 IST
Last Updated 4 ನವೆಂಬರ್ 2019, 15:18 IST
ಬಸನಗೌಡ ತುರ್ವಿಹಾಳ
ಬಸನಗೌಡ ತುರ್ವಿಹಾಳ   

ರಾಯಚೂರು: ಜಿಲ್ಲೆಯ ಮಸ್ಕಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಮುಖಂಡ ಬಸವನಗೌಡ ತುರ್ವಿಹಾಳ ಅವರು ಕೊನೆಗೂ ವರಿಷ್ಠರ ಮನವೊಲಿಕೆಗೆ ಮಣಿದಿದ್ದು, ತುಂಗಾಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಕಾಡಾ) ಅಧ್ಯಕ್ಷರಾಗಿ ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ.

ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ ಅವರು ಬಿಜೆಪಿಯಿಂದ ಉಪಚುನಾವಣೆಗೆ ಸ್ಪರ್ಧಿಸಲುದಾರಿ ಸುಗಮವಾದಂತಾಗಿದೆ. ಮಸ್ಕಿ ಕ್ಷೇತ್ರದ ಕಳೆದ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಸಂಬಂಧಿಸಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ ಪ್ರಕರಣದ ಬಗ್ಗೆ ಬಸನಗೌಡ ಪ್ರತಿಕ್ರಿಯೆ ನೀಡಲು ಈಗ ನಿರಾಕರಿಸುತ್ತಿದ್ದಾರೆ.

ಕಾಡಾ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಬಾರದು ಎಂದು ಬಿಜೆಪಿ ಬೆಂಬಲಿಗರು ಬಸವನಗೌಡ ಅವರ ಮನೆ ಎದುರು ಸೋಮವಾರ ಕೆಲಕಾಲ ಪ್ರತಿಭಟನೆ ನಡೆಸಿದರು. ಕಾಡಾ ಅಧ್ಯಕ್ಷ ಸ್ಥಾನಕ್ಕೆ ಸರ್ಕಾರವು ಅಕ್ಟೋಬರ್‌ 9 ರಂದು ನೇಮಕಗೊಳಿಸಿ ಆದೇಶಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.