ADVERTISEMENT

ಕಾಂಗ್ರೆಸ್‌ ಸುಳ್ಳು ಹೇಳುವುದನ್ನು ನಿಲ್ಲಿಸಲಿ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 16:15 IST
Last Updated 27 ಜನವರಿ 2026, 16:15 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ‘ನರೇಗಾ ಯೋಜನೆಯಲ್ಲಿ ಕುಟುಂಬವೊಂದಕ್ಕೆ 100 ದಿನ ಕೂಲಿ ಒದಗಿಸಲಾಗುತ್ತಿತ್ತು. ಅದನ್ನು ವಿಬಿ ಜಿ ರಾಮ್‌ ಜಿ ಯೋಜನೆಯಲ್ಲಿ 125 ದಿನಕ್ಕೆ ಹೆಚ್ಚಿಸಲಾಗಿದೆ. ಆದರೆ, ಕಾಂಗ್ರೆಸ್‌ ಈ ಬಗ್ಗೆ ಸುಳ್ಳು ಹೇಳುತ್ತಿದೆ’ ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿಬಿ ಜಿ ರಾಮ್‌ ಜಿ ಯೋಜನೆಯನ್ನು ವಿರೋಧಿಸಿ ಕಾಂಗ್ರೆಸ್‌ನ ಪ್ರತಿಭಟನೆ ಕುರಿತು ‘ಎಕ್ಸ್‌’ನಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.

‘ನೂತನ ಯೋಜನೆಯ ಅನುಷ್ಠಾನದಲ್ಲಿ ಕೇಂದ್ರ ಸರ್ಕಾರವೇ ಹಚ್ಚಿನ ವೆಚ್ಚ ಭರಿಸುತ್ತದೆ. ನರೇಗಾದಲ್ಲಿ ಇದ್ದ ಭ್ರಷ್ಟಾಚಾರವನ್ನು ಇದು ತಡೆಯುತ್ತದೆ ಮತ್ತು ನೈಜ ಕೆಲಸಗಾರರಿಗೆ ಹಣ ನೇರವಾಗಿ ತಲುಪುತ್ತದೆ. ಮಧ್ಯವರ್ತಿಗಳ ಹಾವಳಿಗೆ ತಡೆಯೊಡ್ಡುತ್ತದೆ. ಇದನ್ನು ಸಾಧ್ಯವಾಗಿಸುತ್ತಿರುವುದು ತಪ್ಪೇ’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ಅವರ ಎಲ್ಲ ಸುಧಾರಣಾ ಕ್ರಮಗಳನ್ನು ಕಾಂಗ್ರೆಸ್‌ ವಿರೋಧಿಸುತ್ತಲೇ ಬಂದಿದೆ. ವಿಬಿ ಜಿ ರಾಮ್‌ ಜಿ ಯೋಜನೆಯ ಅನುಕೂಲಗಳನ್ನು ಮುಚ್ಚಿಟ್ಟು, ಸುಳ್ಳು ಹೇಳುವುದನ್ನು ಕಾಂಗ್ರೆಸ್‌ ನಿಲ್ಲಿಸಲಿ’ ಎಂದಿದ್ದಾರೆ.

ಸತ್ಯವನ್ನು ಮರೆಮಾಚುವ ಮತ್ತು ಸುಳ್ಳನ್ನು ಪ್ರಚಾರ ಮಾಡುವ ಕಾಂಗ್ರೆಸ್‌ ಕುತಂತ್ರದ ವಿರುದ್ಧ ನಮ್ಮಹೋರಾಟ ನಿರಂತರವಾಗಿ ನಡೆಯುತ್ತದೆ
ಬಸವರಾಜ ಬೊಮ್ಮಾಯಿ ಬಿಜೆಪಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.