ಬಿಬಿಎಂಪಿ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಶಿಕ್ಷಣ ವಿಭಾಗದಲ್ಲಿ ಖಾಲಿ ಇರುವ 284 ಹುದ್ದೆಗಳಿಗೆ ಹಾಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಶಿಕ್ಷಕರನ್ನೇ ಕಾಯಂ ಮಾಡಬೇಕು ಎಂದು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಒತ್ತಾಯಿಸಿದೆ.
ಬಿಬಿಎಂಪಿ ಶಿಕ್ಷಣ ವಿಭಾಗದಲ್ಲಿ ಮಂಜೂರಾದ 872 ಹುದ್ದೆಗಳಿದ್ದು, 736 ಹುದ್ದೆಗಳು ಖಾಲಿ ಇದ್ದವು. 2020ರ ಸಿಪಿಆರ್ ನಿಯಮದ ಪ್ರಕಾರ ಅಗತ್ಯ ಇರುವ ಹುದ್ದೆಗಳ ಸಂಖ್ಯೆಯನ್ನು 420ಕ್ಕೆ ಸೀಮಿತಗೊಳಿಸಲಾಯಿತು. ಖಾಲಿ ಇರುವ 284 ಹುದ್ದೆಗಳ ಭರ್ತಿಗೆ 2021ರಲ್ಲಿ ವಿಶೇಷ ನಿಯಮ ರಚಿಸಿ, ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿತ್ತು. ಆದರೆ, ಇದುವರೆಗೂ ಅನುಮೋದನೆ ದೊರೆತಿಲ್ಲ ಎಂದು ಸಂಘದ ಖಜಾಂಚಿ ಎನ್.ಎಸ್. ಸೋಮಶೇಖರ್ ದೂರಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ನರ್ಸರಿ, ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ 725 ಗುತ್ತಿಗೆ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಖಾಲಿ ಹುದ್ದೆಗಳಿಗೆ ಅವರನ್ನೇ ನೇಮಕ ಮಾಡಿಕೊಳ್ಳಲು ವಿಶೇಷ ನೇಮಕಾತಿ ನಿಯಮ ರೂಪಿಸಬೇಕು. ಹಲವು ವರ್ಷಗಳಿಂದ ಕಡಿಮೆ ಸಂಬಳಕ್ಕೆ ದುಡಿಯುತ್ತಿರುವ ಶಿಕ್ಷಕರಿಗೆ ಸೇವಾ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.