ADVERTISEMENT

Photos: ₹ 5.15 ಲಕ್ಷಕ್ಕೆ ಜವಾರಿ ಹೋರಿ ಮಾರಾಟ!

ಹಂದಿಗುಂದ (ಬೆಳಗಾವಿ ಜಿಲ್ಲೆ):ರಾಯಬಾಗ ತಾಲ್ಲೂಕು ಹಾರೂಗೇರಿ ಸಮೀಪ ಕುರುಬಗೋಡಿಯ ರೈತ ಅಜ್ಜಪ್ಪ ಪದ್ಮಣ್ಣ ಕುರಿ ಅವರು ಸಾಕಿದ 16 ತಿಂಗಳ ಜವಾರಿ ಕಿಲಾರಿ ಹೋರಿಯು ದಾಖಲೆಯ ₹ 5.15 ಲಕ್ಷಕ್ಕೆ ಮಾರಾಟವಾಗಿದೆ.ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಮಂಗಲವೇಡಾ ತಾಲ್ಲೂಕಿನ ನಂದೇಶ್ವರದ ಸೈನಿಕ ದತ್ತ ಜ್ಞಾನೋಬಾ ಕರಡೆ ಅವರು ಖರೀದಿಸಿದ್ದಾರೆ.ರೈತನ ಕುಟುಂಬದವರು, ಮನೆ ಮುಂದೆ ಪೆಂಡಾಲ್ ಹಾಕಿಸಿ ಹೋರಿಗೆ ಸುಮಂಗಲಿಯರಿಂದ ಆರತಿ ಮಾಡಿಸಿ ಹೊರವಲಯದವರೆಗೂ ವಾದ್ಯ ಮೇಳದ ಮೆರವಣಿಗೆಯಲ್ಲಿ ಸಂಭ್ರಮದಿಂದ ಕಳುಹಿಸಿಕೊಟ್ಟರು. ಈ ಕಾರ್ಯಕ್ರಮಕ್ಕೆ ಗ್ರಾಮದವರು ಹಾಗೂ ನೆರೆಯ ಗ್ರಾಮಸ್ಥರು ಕೂಡ ಸಾಕ್ಷಿಯಾದರು.

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2020, 14:52 IST
Last Updated 11 ಡಿಸೆಂಬರ್ 2020, 14:52 IST
   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.