ADVERTISEMENT

ಬೆಳಗಾವಿ : ಪ್ರಧಾನಿ ರೋಡ್‌ಶೋ ಆರಂಭ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2023, 9:59 IST
Last Updated 27 ಫೆಬ್ರುವರಿ 2023, 9:59 IST
   

ಬೆಳಗಾವಿ: ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್‌ಶೋ ಆರಂಭಗೊಂಡಿದೆ.

ಸಾಂಬ್ರಾ ವಿಮಾನ ನಿಲ್ದಾಣದಿಂದ ಮಚ್ಛೆಯ ಕೆಎಸ್‌ಆರ್‌ಪಿ ಮೈದಾನಕ್ಕೆ ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಅವರು, ನಂತರ ರಾಣಿ ಚನ್ನಮ್ಮನ ವೃತ್ತ ತಲುಪಿದರು.

ಇಲ್ಲಿಂದ ರೋಡ್ ಶೋ ಆರಂಭಗೊಂಡಿದ್ದು, ಕಾಲೇಜು ರಸ್ತೆ, ಧರ್ಮವೀರ ಸಂಭಾಜಿ ವೃತ್ತ, ರಾಮಲಿಂಗಖಿಂಡ್‌ ಗಲ್ಲಿ, ಶನಿಮಂದಿರ, ಕ‍ಪಿಲೇಶ್ವರ ಮಂದಿರ ಮೇಲ್ಸೇತುವೆ, ಶಿವಾಜಿ ಉದ್ಯಾನ ರಸ್ತೆ, ಹಳೆ ಪಿ.ಬಿ.ರಸ್ತೆ, ಬಿ.ಎಸ್‌.ಯಡಿಯೂರಪ್ಪ ಮಾರ್ಗವಾಗಿ ಸಂಚರಿಸಿ ವೇದಿಕೆ ತಲುಪಲಿದೆ.

ADVERTISEMENT

ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿರುವ ಅಭಿಮಾನಿಗಳು, ಮೋದಿ ಪರವಾಗಿ ಜೈಕಾರ ಕೂಗುತ್ತಿದ್ದಾರೆ. ಎಲ್ಲೆಡೆ ಕೇಸರಿ ಬಾವುಟ ರಾರಾಜಿಸುತ್ತಿದ್ದು, ಜಾನಪದ ಕಲಾತಂಡಗಳ ಪ್ರದರ್ಶನ ಮನಸೆಳೆಯುತ್ತಿದೆ.

ತಮ್ಮ ವಾಹನದಲ್ಲಿ ಚಾಲಕರ ಪಕ್ಕದ ಮುಂದಿನ ಸಾಲಿನಲ್ಲಿ ನಿಂತಿರುವ ಪ್ರಧಾನಿಗಳು ಜನರತ್ತ ಕೈಬೀಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.