ADVERTISEMENT

ದೇವೇಗೌಡರಿಗೆ ‘ಭಗೀರಥ ಶ್ರೀ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2019, 19:12 IST
Last Updated 8 ಫೆಬ್ರುವರಿ 2019, 19:12 IST
ದೇವೇಗೌಡ
ದೇವೇಗೌಡ   

ಚಿತ್ರದುರ್ಗ: ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಸಚಿವರಾದ ರೇಣುದೇವಿ ಅವರು ‘ಭಗೀರಥ ಶ್ರೀ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಹೊಸದುರ್ಗದ ಭಗೀರಥ ಪೀಠದಲ್ಲಿ ಫೆ.10ರಂದು ನಡೆಯಲಿರುವ ಪುರುಷೋತ್ತಮಾನಂದಪುರಿ ಸ್ವಾಮೀಜಿ ಅವರ 19ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು ₹ 1 ಲಕ್ಷ ನಗದು ಹಾಗೂ ಫಲಕ ಒಳಗೊಂಡಿರುತ್ತದೆ.

ಕ್ರೀಡಾಪಟುಗಳಾದ ಶಿರೋಮಣಿ, ಗಂಗಾದೇವಿ ಶ್ರೀನಿವಾಸ್‌, ಪ್ರವೀಣ್‌ ಕಲ್ಲಪ್ಪ ಅಮ್ಮಾಪುರ, ಲಕ್ಷ್ಮಣ್‌ ಉಪ್ಪಾರ್‌, ಸವಿತಾ ಮಠೂರ್‌, ಶ್ರೀಶೈಲ ಲಾಯಣ್ಣ ಹಾಗೂ ಕೆ.ಟಿ.ಮೋಹನ್‌ ಕುಮಾರ್‌ ಅವರನ್ನು ‘ಲೇಪಾಕ್ಷ ಶ್ರೀ’ ಪ್ರಶಸ್ತಿಗೆ ಮತ್ತು ಉದ್ಯಮಿಗಳಾದ ಡಿ.ವೈ. ಉಪ್ಪಾರ್‌, ಚಂದ್ರಪ್ಪ ಅವರನ್ನು ‘ಭಗೀರಥ ರತ್ನ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.