ADVERTISEMENT

ಆರು ಸಾಧಕರಿಗೆ ‘ಭಾಗ್ಯವಿಧಾತ ಸಿದ್ದರಾಮಯ್ಯ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 18:02 IST
Last Updated 10 ಆಗಸ್ಟ್ 2021, 18:02 IST

ಮೈಸೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯು ಪ್ರಸಕ್ತ ಸಾಲಿನಿಂದ ನೀಡುವ ’ಭಾಗ್ಯವಿಧಾತ ಸಿದ್ದರಾಮಯ್ಯ‘ ರಾಜ್ಯ ಪ್ರಶಸ್ತಿಗೆ ಹುಣಸೂರು ನಾಗಪುರ ಹಾಡಿಯ ಬುಡಕಟ್ಟು ಮಹಿಳಾ ಹೋರಾಟಗಾರ್ತಿ ವೀಣಾಪ್ರಭು ಸೇರಿದಂತೆ ರಾಜ್ಯ ವಿವಿಧ ಕ್ಷೇತ್ರಗಳ ಆರು ಮಂದಿ ಆಯ್ಕೆಯಾಗಿದ್ದಾರೆ.

ಅಂತರರಾಷ್ಟ್ರೀಯ ಚಿತ್ರ ಕಲಾವಿದ ಡಾ. ಬಾಬೂರಾವ್ ನಡೋನಿ, ಬೆಳಗಾವಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕ ಎಂ.ರಾಮಯ್ಯ, ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ರಾಜ್ಯ ಘಟಕದ ಅಧ್ಯಕ್ಷ ಡಾ. ಸಿ. ವೆಂಕಟೇಶ್, ಅಖಿಲ ಭಾರತ ಕ್ರೈಸ್ತ ಮಹಾಸಭಾದ ಉಪಾಧ್ಯಕ್ಷೆ ರೀನಾ ಪ್ಯಾಟ್ರಿಕ್ ಶಿವಮೊಗ್ಗ, ಸುಜೀವ್ ಸಂಸ್ಥೆಯ ಮುಖ್ಯಸ್ಥ ಎಸ್. ರಾಜಾರಾಂ ಪ್ರಶಸ್ತಿಗೆ ಆಯ್ಕೆಯಾದವರು.

ಪುರಸ್ಕೃತರಿಗೆ 12ರಂದು ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಪ್ರಶಸ್ತಿ ಫಲಕ, ಸ್ಮರಣಿಕೆ ನೀಡಿ ಸನ್ಮಾನಿಸಲಾಗುವುದು. ಮುಂದಿನ ವರ್ಷದಿಂದ ನಗದು ಬಹುಮಾನವನ್ನು ನೀಡಲಾಗುವುದು ಎಂದು ವೇದಿಕೆಯ ಅಧ್ಯಕ್ಷ ಕೆ.ಎಸ್‌.ಶಿವರಾಮು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.