ADVERTISEMENT

ಸಚಿವ ಸಂಪುಟ ‌| ಭಟ್ಕಳ ಶಾಸಕ ಮಂಕಾಳ ವೈದ್ಯಗೆ ಒಲಿದ ‘ಮಂತ್ರಿ‘ ಸ್ಥಾನ

​ಪ್ರಜಾವಾಣಿ ವಾರ್ತೆ
Published 27 ಮೇ 2023, 6:25 IST
Last Updated 27 ಮೇ 2023, 6:25 IST
ಮಂಕಾಳ ವೈದ್ಯ
ಮಂಕಾಳ ವೈದ್ಯ   

ಉತ್ತರ ಕನ್ನಡ : ಭಟ್ಕಳ ಕ್ಷೇತ್ರಕ್ಕೆ ಎರಡನೆ ಬಾರಿಗೆ ಶಾಸಕರಾಗಿರುವ ಮಂಕಾಳ ವೈದ್ಯ ಅವರಿಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿಯಾಗುವ ಅವಕಾಶ ಸಿಕ್ಕಿದೆ.

2013ರಲ್ಲಿ ಮೊದಲ ಬಾರಿಗೆ ಮಂಕಾಳ ಅವರು ಭಟ್ಕಳ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಬಳಿಕ ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದರು. 2018ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತರೂ ಪಕ್ಷ ಸಂಘಟನೆ ಮಾಡಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು 32 ಸಾವಿರ ಮತಗಳಿಂದ ಸೋಲಿಸಿದ್ದರು.

2005, 2010ರಲ್ಲಿ ಜಿಲ್ಲಾ ಎರಡು ಅವಧಿಗೆ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ ಆಯ್ಕೆಯಾಗಿ ಕೆಲಸ ಮಾಡಿದ್ದು ಅವರಿಗೆ ರಾಜಕೀಯ ಅನುಭವ ನೀಡಿದೆ.

ADVERTISEMENT

ಮಂಕಾಳ ವೈದ್ಯ ಅವರ ಕಿರು ಪರಿಚಯ

ಪೂರ್ಣ ಹೆಸರು : ಮಂಕಾಳ ವೈದ್ಯ

ವಯಸ್ಸು : 51

ಜಾತಿ : ಮೀನುಗಾರ (ಮೊಗೇರ)

ಶಿಕ್ಷಣ : 8ನೇ ತರಗತಿ

ಎಷ್ಟನೆ ಬಾರಿ ಶಾಸಕ : ಎರಡನೇ ಬಾರಿ

ಹಿಂದೆ ನಿರ್ವಹಿಸಿದ್ದ ಖಾತೆ : ಇಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.