ADVERTISEMENT

ಜನನ–ಮರಣ ನೋಂದಣಿ: ಮಾಹಿತಿದಾರರ ನೇಮಕ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2021, 4:40 IST
Last Updated 11 ಡಿಸೆಂಬರ್ 2021, 4:40 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಜನನ, ಮರಣಗಳ ನೋಂದಣಿಗಾಗಿ ನೋಂದಣಾಧಿಕಾರಿಗಳಿಗೆ ಮಾಹಿತಿ ನೀಡಲು ರಾಜ್ಯ ಸರ್ಕಾರ ಮಾಹಿತಿದಾರರನ್ನು ನೇಮಕ ಮಾಡಿ ಸುತ್ತೋಲೆ ಹೊರಡಿಸಿದೆ.

ಇದಕ್ಕೆ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ಗಳಲ್ಲಿ ಜನನ ಮತ್ತು ಮರಣ ಘಟನೆಗಳ ತ್ವರಿತ ನೋಂದಣಿಗೆ ಸಹಾಯಕವಾಗಲು ಅಧಿಕಾರಿಗಳನ್ನು ಒಳಗೊಂಡ ಒಂದು ವಾಟ್ಸಾಪ್‌ ಗ್ರೂಪ್‌ ರಚಿಸಲಾಗುವುದು. ಮಾಹಿತಿದಾರರು ವಾಟ್ಸಾಪ್‌ ಮೂಲಕ ನೋಂದಣಿ ಮಾಡಬಹುದು.

ಮಾಹಿತಿದಾರರು ಯಾರು: ಮನೆ– ಕುಟುಂಬದ ಯಜಮಾನ. ಆಸ್ಪತ್ರೆ, ಪ್ರಸವ ಗೃಹ– ಪ್ರಭಾರದಲ್ಲಿರುವ ವೈದ್ಯಾಧಿಕಾರಿ ಅಥವಾ ಅಧಿಕೃತ ವ್ಯಕ್ತಿ. ಜೈಲು– ಪ್ರಭಾರದಲ್ಲಿರುವ ಜೈಲರು. ಹೋಟೆಲ್‌, ಛತ್ರ, ವಸತಿನಿಲಯ, ವಸತಿ ಗೃಹ–ಪ್ರಭಾರದಲ್ಲಿರುವ ವ್ಯಕ್ತಿ. ಸಾರ್ವಜನಿಕ ಸ್ಥಳ (ನವಜಾತ ಶಿಶು ಅಥವಾ ಮೃತ ದೇಹದ ಸಂಬಂಧ)– ಗ್ರಾಮದ ಮುಖ್ಯಸ್ಥ, ಸ್ಥಳೀಯ ಪೊಲೀಸ್‌ ಠಾಣೆಯ ಅಧಿಕಾರಿ. ಚಲಿಸುವ ವಾಹನಗಳು– ವಾಹನದ ಪ್ರಭಾರ ಹೊಂದಿರುವ ವ್ಯಕ್ತಿ. ತೋಟ (ಪ್ಲಾಂಟೇಶನ್)– ತೋಟದ ಅಧೀಕ್ಷಕ.

ADVERTISEMENT

ಇದಲ್ಲದೇ ಅಂಗನವಾಡಿ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತರು ತಮ್ಮ ಕ್ಷೇತ್ರಗಳಲ್ಲಿ ಸಂಭವಿಸುವ ಜನನ– ಮರಣಗಳ ಘಟನೆಗಳ ಮಾಹಿತಿಯನ್ನು ನೋಂದಣಾಧಿಕಾರಿಗಳಿಗೆ ತಿಳಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಆರೋಗ್ಯ ಇಲಾಖೆ ಸುತ್ತೋಲೆಯ ಮೂಲಕ ಸೂಚನೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.