ADVERTISEMENT

‘ಬಿಜೆಪಿಯಿಂದ ದ್ವಿಮುಖ ನೀತಿ ಅನುಸರಣೆ: ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2018, 19:48 IST
Last Updated 10 ನವೆಂಬರ್ 2018, 19:48 IST

ಬೆಂಗಳೂರು: ‘ಕೆಲವು ವರ್ಷಗಳ ಹಿಂದೆ ಅಧಿಕಾರಕ್ಕಾಗಿ ಟಿಪ್ಪುವನ್ನು ಬೆಂಬಲಿಸಿದ್ದ ಯಡಿಯೂರಪ್ಪ ಇಂದು ಅದೇ ಟಿಪ್ಪು ಹೆಸರಿನಲ್ಲಿ ಜನರ ನಡುವೆ ಕೋಮುಭಾವನೆ ಕೆರಳಿಸುತ್ತಿದ್ದಾರೆ’ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಆಕ್ರೋಶ ವ್ಯಕ್ತಪಡಿಸಿದರು.

‘ಟಿಪ್ಪು ವೆಲ್‌ಫೇರ್‌ ಟ್ರಸ್ಟ್’ ವತಿಯಿಂದ ಆಯೋಜಿಸಿದ್ದ ‘ಟಿಪ್ಪು ಜಯಂತಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಟಿಪ್ಪು ಮತಾಂಧನಲ್ಲ. ಅನೇಕ ಹಿಂದೂ ದೇವಾಲಯಗಳ ಜೀರ್ಣೋದ್ಧಾರ ಹಾಗೂ ನಿರ್ಮಾಣಕ್ಕೆ ಕೊಡುಗೆ ನೀಡಿದ್ದಾನೆ. ಅವರನ್ನು ಹಿಂದೂ ವಿರೋಧಿ ಎಂಬಂತೆ ಚಿತ್ರಿಸುವುದು ಸೂಕ್ತವಲ್ಲ’ ಎಂದರು.

ADVERTISEMENT

‘ಕೆಜಿಪಿ ಪಕ್ಷ ಸ್ಥಾಪನೆ ಮಾಡಿದ್ದ ವೇಳೆ ಖುದ್ದು ಯಡಿಯೂರಪ್ಪ ಅವರೇ ಟಿಪ್ಪುವನ್ನು ಹಾಡಿ ಹೊಗಳಿದ್ದರು. ಅಶೋಕ್ ಕೂಡಾ ಟಿಪ್ಪು ಗುಣಗಾನ ಮಾಡಿದ್ದರು. ಅಂದು ದೇಶಪ್ರೇಮಿ ಎನಿಸಿದ್ದ ಟಿಪ್ಪು ಇಂದು ಬಿಜೆಪಿ ನಾಯಕರಿಗೆ ದೇಶ ಹಾಗೂ ಧರ್ಮ ವಿರೋಧಿಯಾದುದು ಹೇಗೆ? ಎಂದು ವ್ಯಂಗ್ಯವಾಡಿದರು. ಮತಕ್ಕಾಗಿ ದ್ವೇಷ ಭಾವನೆ ಬಿತ್ತುವುದು ಶೋಭೆಯಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.