ADVERTISEMENT

ಬಿಜೆಪಿಗೆ 'ಮಿಣಿ ಮಿಣಿ' ಪದದ ಅರ್ಥ ವಿವರಿಸಿದ ಎಚ್‌.ಡಿ. ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2020, 9:40 IST
Last Updated 28 ಜನವರಿ 2020, 9:40 IST
ಕುಮಾರಸ್ವಾಮಿ
ಕುಮಾರಸ್ವಾಮಿ   

ಬೆಂಗಳೂರು: ಮಿಣಿ ಮಿಣಿ ಪದ ಬಳಕೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಗುರಿಯಾಗಿದ್ದ ಜೆಡಿಎಸ್‌ ನಾಯಕ,ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಿಣಿ ಮಿಣಿ ಪದದ ಅರ್ಥ ಹೇಳುವ ಮೂಲಕ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಮಿಣಿಮಿಣಿ ಪದ ಬಳಕೆ ಕುರಿತಂತೆ ಮಂಗಳವಾರ ಟ್ವೀಟ್‌ ಮಾಡಿರುವ ಕುಮಾರಸ್ವಾಮಿ, ಹೊಳೆಯುವ ಪದಾರ್ಥಕ್ಕೆ ಗ್ರಾಮೀಣ ಭಾಷೆಯಲ್ಲಿ ಮಿಣಿಮಿಣಿ ಎಂದು ಕರೆಯುತ್ತಾರೆ. ಇದು ಶುದ್ಧ ಕನ್ನಡ ಪದವಾಗಿದ್ದು, ಗ್ರಾಮೀಣ ಭಾಗದ ಜನರು ಈ ಪದವನ್ನು ಬಳಕೆ ಮಾಡುತ್ತಾರೆ. ಬಿಜೆಪಿಯವರ ಜಿನ್ಸ್‌ ಪಾಕಿಸ್ತಾನ ಆಗಿರುವುದರಿಂದಅವರಿಗೆ ಕನ್ನಡ ಪದಗಳ ಬಗ್ಗೆ ತಾತ್ಸಾರವಿದ್ದು ಅವರು ಗ್ರಾಮೀಣ ಕರ್ನಾಟಕವನ್ನು ಅಪಮಾನಿಸಿದ್ದಾರೆ ಎಂದು ಟ್ವೀಟ್‌ ಮಾಡಿದ್ದಾರೆ.

ನಾನು ಯಾವುದೇ ಸುಳ್ಳು ಹೇಳಿಲ್ಲ, ನಿಂದನಾತ್ಮಕ ಪದವನ್ನು ಬಳಕೆ ಮಾಡಿಲ್ಲ, ಪತ್ರಿಕೆಯಲ್ಲಿ ಬಂದಿದ್ದ ವರದಿಯನ್ನೇ ಓದಿ ಹೇಳಿದ್ದೇನೆ, ಕನ್ನಡ ಭಾಷೆಯ ಬಗ್ಗೆ ಅರಿವಿರದ ಬಿಜೆಪಿಯವರು ಸತ್ಯದ ಮಾತನ್ನು ಗೇಲಿ ಮಾಡಿ, ಉಗ್ರ ಆದಿತ್ಯ ರಾವ್‌ ಬೆನ್ನಿಗೆ ನಿಂತಿದ್ದಾರೆ ಇವರು ಧರ್ಮ ವಿರೋಧಿಗಳು ಎಂದು ಕುಮಾರಸ್ವಾಮಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ADVERTISEMENT

ನಾನು ಈ ಹಿಂದೆ ಹೇಳಿದಂತೆ ಪಾಕಿಸ್ತಾನ ಹಾಗೂನಾಜಿ ಜೀನ್ ಹೊಂದಿರುವ ಬಿಜೆಪಿಯವರಿಗೆ ಕನ್ನಡದ ಮೂಲ ನಿವಾಸಿ ಸಮುದಾಯದ ನಾಯಕರನ್ನು ಕಂಡರೆ ಉರಿ. ಅದಕ್ಕೇ ಈ ಮಣ್ಣಿನ ಮೂಲ ನಿವಾಸಿಪ್ರತಿನಿಧಿಯಾಗಿರುವನನ್ನನ್ನು ಎದುರಲ್ಲಿ‌ ನಿಂತು ಹೋರಾಡಲಾಗದೇ ಗೇಲಿ ಮೂಲಕ ಹಣಿಯುವ ಪ್ರಯತ್ನ ಮಾಡುತ್ತಿದ್ದಾರೆಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ದೇಶದಲ್ಲಿ ಇಂದು ನಡೆಯುತ್ತಿರುವುದು ಕುಟಿಲ ರಾಜಕಾರಣ. ಅದರ ಭಾಗವೇ ಗೇಲಿ, ಕೊಂಕು, ಟ್ರೋಲ್‌ಗಳು ಎಂದಿದ್ದಾರೆ. ಒಬ್ಬ ನಾಯಕನ ವಿರುದ್ಧ ಎದುರು ನಿಂತು ಹೋರಾಡಲಾಗದ ಹೇಡಿಗಳು ಮಾತ್ರ ಗೇಲಿ, ಅಪಹಾಸ್ಯಗಳಂತಹ ತಂತ್ರಗಳ ಮೂಲಕ ನನ್ನ ಹನನಕ್ಕೆ ನಿಂತಿದ್ದಾರೆ. ಮಿಣಿ ಮಿಣಿ ಎಂಬ ಶಬ್ಧ ಇಟ್ಟುಕೊಂಡು ಬಿಜೆಪಿ‌ ಮಾಡುತ್ತಿರುವುದು ಹೇಡಿಗಳ ಕೆಲಸ ಎಂದು ಸರಣಿ ಟ್ವೀಟ್‌ಗಳ ಮೂಲಕ ಬಿಜೆಪಿಗೆ ಟಾಂಗ್‌ ಕೊಟ್ಟಿದ್ದಾರೆ.

ಕುಮಾರಸ್ವಾಮಿ ಮಂಗಳೂರು ಬಾಂಬ್ ಪ್ರಕರಣದಲ್ಲಿ ಮಾಧ್ಯಮಗಳ ವರದಿ ಆಧರಿಸಿ ಪಟಾಕಿ ಪೌಡರ್ ಕುರಿತಂತೆಮಿಣಿ ಮಿಣಿ ಪದ ಬಳಕೆ ಮಾಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಟ್ರೋಲ್‌ ಆಗಿತ್ತು. ಇದನ್ನು ಬಿಜೆಪಿಯವರೇ ಮಾಡಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಈ ಹಿಂದೆ ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.