ಚಿಕ್ಕಮಗಳೂರು: ಶಾಸಕ ಸಿ.ಟಿ.ರವಿ ಅವರ ತಂದೆ ಸಿ.ಇ.ತಿಮ್ಮೇಗೌಡ (92) ಬೆಂಗಳೂರಿನಲ್ಲಿ ಶನಿವಾರ ನಿಧನರಾದರು.
ತಿಮ್ಮೇಗೌಡ ಅವರು ಚಿಕ್ಕಮಾಗರವಳ್ಳಿಯವರು. ಅವರು ಕೃಷಿಕರು.ತಿಮ್ಮೇಗೌಡ ಅವರಿಗೆ ಸಿ.ಟಿ.ರವಿ ಸಹಿತ ಇಬ್ಬರು ಪುತ್ರರು, ಮೂವರು ಪುತ್ರಿಯರು ಇದ್ದಾರೆ.
ಆಲ್ದೂರು ಸಮೀಪದ ತೋಟದಲ್ಲಿ ಭಾನುವಾರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.