ADVERTISEMENT

ವೇಣುಗೋಪಾಲ್‌, ಸುರ್ಜೆವಾಲಾ ಹಣ ನಿಗದಿ ಮಾಡಲು ಬಂದಿದ್ದಾರೆಯೇ?: ಬಿಜೆಪಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2023, 16:04 IST
Last Updated 1 ನವೆಂಬರ್ 2023, 16:04 IST
ಬಿಜೆಪಿ ಬಾವುಟ (ಪ್ರಾತಿನಿಧಿಕ ಚಿತ್ರ)
ಬಿಜೆಪಿ ಬಾವುಟ (ಪ್ರಾತಿನಿಧಿಕ ಚಿತ್ರ)   

ಬೆಂಗಳೂರು: ಕಾಂಗ್ರೆಸ್ ನಾಯಕರಾದ ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಪಂಚ ರಾಜ್ಯ ಚುನಾವಣೆಗೆ ಹಣ ಸಂಗ್ರಹಕ್ಕೆ ಗುರಿ ನಿಗದಿ ಮಾಡಲು ಬಂದಿದ್ದಾರೆಯೇ ಎಂದು  ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ಹಾಗೂ ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಪ್ರಶ್ನಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಹಿಂದೆಯೂ ಇವರಿಬ್ಬರು ಬಂದು ಹೋದ ಕೆಲವೇ ದಿನಗಳ ಬಳಿಕ ಗುತ್ತಿಗೆದಾರರ ಮನೆಗಳಲ್ಲಿ ₹102 ಕೋಟಿ ಸಿಕ್ಕಿತ್ತು. ಅದು ಕಾಂಗ್ರೆಸ್‌ ಪಕ್ಷವೇ ಸಂಗ್ರಹಿಸಿದ ಹಣ ಆಗಿತ್ತು. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರ ಪಾತ್ರ ಅದರಲ್ಲಿದೆ ಎಂದು ಆರೋಪಿಸಿದರು.

ಹಣ ಇಟ್ಟುಕೊಂಡ ಆರೋಪಿಗಳು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರಿಗೆ ಹತ್ತಿರದವರು. ಪಂಚ ರಾಜ್ಯಗಳ ಚುನಾವಣೆಗೆ ಬಳಸಿಕೊಳ್ಳಲು ಹಣ ಸಂಗ್ರಹಿಸಿಡಲಾಗಿತ್ತು ಎಂಬುದು ಬಹಿರಂಗವಾಗಿದೆ. ಆದ ಕಾರಣ ಇಬ್ಬರೂ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ADVERTISEMENT

ಸಚಿವ ಸ್ಥಾನ ಸಿಗದೇ ಬೇಸರ ವ್ಯಕ್ತಪಡಿಸುವವರನ್ನು ಸಮಾಧಾನಪಡಿಸಲು ನಿಗಮ–ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲು ಬಂದಿದ್ದಾರೆ. ಬಹುಶಃ ನಿಗಮ ಮಂಡಳಿಗಳ ಅಧ್ಯಕ್ಷರಿಗೂ ಗುರಿ ನಿಗದಿ ಮಾಡುವುದು ಇವರ ಭೇಟಿ ಉದ್ದೇಶ ಆಗಿರಬಹುದು ಎಂದು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.