ADVERTISEMENT

ಬಿಜೆಪಿ ಬಂಡಾಯ ಅಭ್ಯರ್ಥಿಗೆ ಹಾಲಿನ ಅಭಿಷೇಕ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 10:47 IST
Last Updated 1 ಡಿಸೆಂಬರ್ 2019, 10:47 IST
ವಿಜಯನಗರ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಬಂಡಾಯ ಅಭ್ಯರ್ಥಿ ಕವಿರಾಜ ಅರಸ್‌ ಅವರಿಗೆ ಅವರ ಬೆಂಬಲಿಗರು ಸೋಮವಾರ ಹೊಸಪೇಟೆಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ಹಾಲಿನ ಅಭಿಷೇಕ ಮಾಡಿದರು
ವಿಜಯನಗರ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಬಂಡಾಯ ಅಭ್ಯರ್ಥಿ ಕವಿರಾಜ ಅರಸ್‌ ಅವರಿಗೆ ಅವರ ಬೆಂಬಲಿಗರು ಸೋಮವಾರ ಹೊಸಪೇಟೆಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ಹಾಲಿನ ಅಭಿಷೇಕ ಮಾಡಿದರು   

ಹೊಸಪೇಟೆ: ವಿಜಯನಗರ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸೋಮವಾರ ಉಮೇದುವಾರಿಕೆ ಸಲ್ಲಿಸಿದ ಹಿರಿಯ ಮುಖಂಡ ಕವಿರಾಜ ಅರಸ್‌ ಅವರಿಗೆ ಅವರ ಬೆಂಬಲಿಗರು ನಗರದಲ್ಲಿ ಹಾಲಿನ ಅಭಿಷೇಕ ಮಾಡಿದರು.

ಬೆಳಿಗ್ಗೆ ನಗರದ ಬಾಲಾಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಚುನಾವಣಾಧಿಕಾರಿ ಕಚೇರಿಗೆ ಬಂದು ಅರಸ್‌ ನಾಮಪತ್ರ ಸಲ್ಲಿಸಿ ಹೊರಬಂದರು. ಈ ವೇಳೆ ಹೊರಗೆ ಕಾದು ನಿಂತಿದ್ದ ಅವರ ಬೆಂಬಲಿಗರು ಅವರಿಗೆ ಮಾಲೆ ಹಾಕಿ, ಕೊಡಗಳಲ್ಲಿ ತುಂಬಿಟ್ಟಿದ್ದ 101 ಲೀಟರ್‌ ಹಾಲಿನ ಅಭಿಷೇಕ ಮಾಡಿ, ಅಭಿಮಾನ ತೋರಿದರು.

ಬಳಿಕ ಮಾತನಾಡಿದ ಕವಿರಾಜ ಅರಸ್‌, 'ಬಿಜೆಪಿಯಿಂದ ನನಗೆ ಅನ್ಯಾಯವಾಗಿದೆ. ಪಕ್ಷವು ಪಕ್ಷಾಂತರಿ ಆನಂದ್ ಸಿಂಗ್‌ಗೆ ಮಣೆ ಹಾಕಿ ಮೂಲ, ನಿಷ್ಠಾವಂತರಿಗೆ ಅನ್ಯಾಯ ಮಾಡಿದೆ. ಬೆಂಬಲಿಗರು, ಕಾರ್ಯಕರ್ತರ ಅಭಿಲಾಷೆಯಂತೆ ಚುನಾವಣೆಗೆ ಪಕ್ಷೇತರನಾಗಿ ನಾಮಪತ್ರ ಸಲ್ಲಿಸಿರುವೆ. ಜಯದ ಭರವಸೆ ಇದೆ. ಯಾವ ಕಾರಣಕ್ಕೂ ನಾಮಪತ್ರ ಹಿಂಪಡೆಯುವುದಿಲ್ಲ' ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.