ADVERTISEMENT

ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳುವ ತಂತ್ರ: ಸಚಿವ ರವಿಗೆ ಅಹವಾಲು!

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 21:29 IST
Last Updated 14 ಡಿಸೆಂಬರ್ 2019, 21:29 IST
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ‌ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಸಚಿವ ಸಿ.ಟಿ.ರವಿ ಅವರಿಗೆ ಮನವಿ ಸಲ್ಲಿಸಿದರು --- –ಪ್ರಜಾವಾಣಿ ಚಿತ್ರ
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ‌ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಸಚಿವ ಸಿ.ಟಿ.ರವಿ ಅವರಿಗೆ ಮನವಿ ಸಲ್ಲಿಸಿದರು --- –ಪ್ರಜಾವಾಣಿ ಚಿತ್ರ   

ಬೆಂಗಳೂರು: ಅಧಿಕಾರ ಬಂದಾಗ ಕಾರ್ಯಕರ್ತರು ಪಕ್ಷದಿಂದ ದೂರವಾಗಬಾರದು ಎಂಬ ಕಾರಣಕ್ಕಾಗಿ ನಗರದ ಬಿಜೆಪಿ ಕಚೇರಿಯಲ್ಲಿ ಅಹವಾಲು ಆಲಿಸುವ ಕಾರ್ಯಕ್ರಮ ಆರಂಭವಾಗಿದೆ.

ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಜೃತಿ ಹಾಗೂ ಸಕ್ಕರೆ ಸಚಿವ ಸಿ.ಟಿ.ರವಿ ಅವರು ಶನಿವಾರ ಬೆಳಿಗ್ಗೆ ಅಹವಾಲು ಆಲಿಸಿದರು. ಸ್ವತಃ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರೇ ಕಚೇರಿಗೆ ಬಂದು, ತುಮಕೂರು ಜಿಲ್ಲೆಯ ಕಲಾವಿದ ಎಚ್‌.ಎಂ.ಬಸವಪ್ರಭು ಎಂಬುವವರನ್ನು ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯತ್ವಕ್ಕೆ ನಾಮಕರಣ ಮಾಡುವಂತೆ ಕೋರಿ ಮನವಿ ಸಲ್ಲಿಸಿದರು.

‘ನಾನು ನಡೆಸುತ್ತಿರುವ ಎರಡನೇ ಅಹವಾಲು ಸ್ವೀಕಾರ ಕಾರ್ಯಕ್ರಮ ಇದು. ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಅಶ್ವತ್ಥನಾರಾಯಣ ಅವರೂ ಇಂತಹ ಅಹವಾಲು ಸ್ವೀಕಾರ ನಡೆಸಿ
ದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಚಿವರು ಇದೇ ಹಾದಿ ತುಳಿಯಲಿದ್ದಾರೆ. ನಿರ್ದಿಷ್ಟ ದಿನಾಂಕ ನಿಗದಿಪಡಿಸುವ ವಿಚಾರವೂ ಇದೆ’ ಎಂದು ಸಚಿವ ಸಿ.ಟಿ.ರವಿ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ಅಧಿಕಾರ ಸಿಕ್ಕಿದಾಗ ಸಾರ್ವಜನಿಕರಿಗೆ, ಪಕ್ಷದ ಕಾರ್ಯಕರ್ತರಿಗೆ ಸಚಿವರು ಸಿಗುವುದು ಕಡಿಮೆಯಾಗುತ್ತದೆ. ಆಗ ಮೊದಲಾಗಿ ನಮ್ಮಿಂದ ದೂರವಾಗುವವರು ಕಾರ್ಯಕರ್ತರು. ಇದನ್ನು ತಪ್ಪಿಸಬೇಕಾಗಿದೆ. ಕಮ್ಯುನಿಸ್ಟ್‌ ಪಕ್ಷದವರಲ್ಲಿ ಈಗಲೂ ಈ ವ್ಯವಸ್ಥೆ ಇದೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಸ್ವತಃ ಸಿ.ಎಂ ಅವರೇ ಪಕ್ಷದ ಕಚೇರಿಗೆ ಬಂದು ಅಹವಾಲು ಆಲಿಸುತ್ತಿದ್ದರು’ ಎಂದರು.

ಕಾಂಗ್ರೆಸ್‌ ಅಧಿಕಾರ ಅವಧಿಯಲ್ಲೂ ಇತ್ತು: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಒಂದಿಷ್ಟು ಸಮಯ ಈ ವ್ಯವಸ್ಥೆ ಜಾರಿಯಲ್ಲಿತ್ತು. ಕೆಲವು ತಿಂಗಳ ಬಳಿಕ ಮಾಧ್ಯಮಗಳ ಗಮನ ಕಡಿಮೆಯಾಗುತ್ತಲೇ ಅಹವಾಲು ಆಲಿಕೆಯ ವ್ಯವಸ್ಥೆಯೂ ನಿಂತುಹೋಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.