ADVERTISEMENT

ದವಳಗಿರಿಯೇ ಈಗ ಬಿಜೆಪಿ ಹೈಕಮಾಂಡ್: ಕಟೀಲ್‌ರನ್ನು ಕೆಣಕಿದ ಕಾಂಗ್ರೆಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜುಲೈ 2021, 9:26 IST
Last Updated 30 ಜುಲೈ 2021, 9:26 IST
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌    

ಬೆಂಗಳೂರು: 'ದವಳಗಿರಿಯೇ(ಬೆಂಗಳೂರಿನಲ್ಲಿರುವ ಯಡಿಯೂರಪ್ಪ ನಿವಾಸ)ಈಗ ಬಿಜೆಪಿ ಹೈಕಮಾಂಡ್' ಎಂದು ಟ್ವೀಟ್‌ ಮಾಡುವ ಮೂಲಕ ಕಾಂಗ್ರೆಸ್‌ ಪಕ್ಷವು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರನ್ನು ಕೆಣಕುವ ಪ್ರಯತ್ನ ಮಾಡಿದೆ.

'ದೆಹಲಿಯಲ್ಲಿರುವ ಪಕ್ಷ ನಿಷ್ಠನನ್ನು ಸಿಎಂ ಮಾಡಿಬಿಡುತ್ತೇವೆ ಎಂದು ಕಟೀಲ್‌ ಕೊಚ್ಚಿಕೊಳ್ಳುತ್ತಿದ್ದರು. ಆದರೆ ಸಿಎಂ ಆಗಿದ್ದು ಬಿಎಸ್‌ವೈ ನಿಷ್ಠರಾದ ಬಸವರಾಜ ಬೊಮ್ಮಾಯಿ. ಈ ಹೊತ್ತಿನಲ್ಲಿ ಬಿಜೆಪಿ ವರ್ಸಸ್‌ ಬಿಜೆಪಿ ಕಿತ್ತಾಟ ಮತ್ತೊಂದು ಮಗ್ಗುಲಿಗೆ ಹೊರಳಿ ಸ್ಥಿರ ಸರ್ಕಾರ, ಸುಸ್ಥಿರ ಆಡಳಿತ ಎನ್ನುವುದು ರಾಜ್ಯಕ್ಕೆ ಮರೀಚಿಕೆಯಾಗಿದೆ' ಎಂದು ಟೀಕಿಸಿದೆ.

'ಕಳೆದ 2 ವರ್ಷದಲ್ಲಿ ಸಿಡಿ ಸರ್ಕಾರ ಒಂದೇ ಒಂದು ದಿನವೂ ರಾಜ್ಯದ ಸಮಸ್ಯೆಗಳತ್ತ ಗಮನ ಹರಿಸಲಿಲ್ಲ. ಅಧಿಕಾರಕ್ಕೆ ಏರಿದ ದಿನದಿಂದಲೂ ಸಂಪುಟ ಕಸರತ್ತು, ಆಂತರಿಕ ಕಿತ್ತಾಟ, ನಾಯಕತ್ವ ಬಡಿದಾಟ, ಸಿಡಿ ರಂಪಾಟದಲ್ಲಿಯೇ ಕಾಲ ಕಳೆಯಿತು, ಮುಂದೆಯೂ ಅದೇ ಮುಂದುವರೆಯಲಿದೆ. ನಿಮ್ಮ ಒಂದೇ ಒಂದು ಜನಪರ ಯೋಜನೆಯ ಹೆಸರು ಹೇಳಲು ಸಾಧ್ಯವೇ?' ಎಂದು ರಾಜ್ಯ ಬಿಜೆಪಿ ಸರ್ಕಾರವನ್ನು ಟ್ಯಾಗ್‌ ಮಾಡುವ ಮೂಲಕ ಕಾಂಗ್ರೆಸ್‌ ಪ್ರಶ್ನಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.