ADVERTISEMENT

ಬಿಎಂಆರ್‌ಸಿಎಲ್‌ | ಜಮೀನು ಹಸ್ತಾಂತರ: ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ ಚರ್ಚೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2025, 16:28 IST
Last Updated 28 ಫೆಬ್ರುವರಿ 2025, 16:28 IST
<div class="paragraphs"><p>&nbsp; ಬಿಎಂಆರ್‌ಸಿಎಲ್‌</p></div>

  ಬಿಎಂಆರ್‌ಸಿಎಲ್‌

   

ಬೆಂಗಳೂರು: ನಗರದ ಹೆಬ್ಬಾಳ ಬಳಿ (ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ) ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿರುವ 45 ಎಕರೆ ಜಮೀನು ಹಸ್ತಾಂತರಿಸುವಂತೆ ಬೆಂಗಳೂರು ಮೆಟ್ರೊ ರೈಲು ನಿಗಮ ಸಲ್ಲಿಸಿರುವ ಪ್ರಸ್ತಾವ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಶುಕ್ರವಾರ ಸಭೆ ನಡೆಸಿ, ಚರ್ಚಿಸಿದರು.

45 ಎಕರೆ ಜಮೀನನ್ನು ಯಾವ ರೀತಿ ಹಂಚಿಕೆ ಮಾಡಬಹುದು ಎಂಬ ಕುರಿತು ಕಾನೂನಾತ್ಮಕ ಅಂಶಗಳು ಮತ್ತು ಪರಿಹಾರ ಮಾರ್ಗೊಪಾಯಗಳ ಬಗ್ಗೆ ಇಬ್ಬರೂ ಸಮಾಲೋಚನೆ ನಡೆಸಿದರು ಎಂದು ಮೂಲಗಳು ಹೇಳಿವೆ.

ADVERTISEMENT

ಹೆಬ್ಬಾಳದ ಬಳಿ 45 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡಿರುವ ಕೆಐಎಡಿಬಿಯು ಆ ಸ್ವತ್ತನ್ನು ವಿಶೇಷ ಉದ್ದೇಶದ ಯೋಜನೆಗಾಗಿ ಸಂಸ್ಥೆಯೊಂದಕ್ಕೆ ಹಂಚಿಕೆ ಮಾಡಿತ್ತು. ಬಹು ಮಾದರಿಯ ಸಾರಿಗೆ ಕೇಂದ್ರ ನಿರ್ಮಾಣಕ್ಕಾಗಿ ಆ ಜಮೀನು ನೀಡುವಂತೆ ಮೆಟ್ರೊ ನಿಗಮವು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.