ADVERTISEMENT

ಇಂದಿನಿಂದ 180 ಬಿಎಂಟಿಸಿ ಬಸ್‌ಗಳು ರಸ್ತೆಗೆ: ಯಾರೆಲ್ಲಾ ಪ್ರಯಾಣಿಸಬಹುದು ಗೊತ್ತೇ?

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 1:13 IST
Last Updated 26 ಮಾರ್ಚ್ 2020, 1:13 IST
   

ಬೆಂಗಳೂರು: ಲಾಕ್‌ಡೌನ್‌ ಇದ್ದರೂ ಕೇಂದ್ರ, ರಾಜ್ಯ ಸರ್ಕಾರಗಳು ಅಗತ್ಯ ಸೇವೆಗಳ ಲಭ್ಯತೆಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಹೀಗಾಗಿ ಈ ಕ್ಷೇತ್ರಗಳ ಸಿಬ್ಬಂದಿಯ ಪ್ರಯಾಣಕ್ಕಾಗಿ ಬಿಎಂಟಿಸಿ ಇಂದಿನಿಂದ ರಾಜಧಾನಿಯಲ್ಲಿ 180 ಬಸ್‌ಗಳನ್ನು ರಸ್ತೆಗೆ ಇಳಿಸಲು ನಿರ್ಧರಿಸಿದೆ.

‘ಬೆಂಗಳೂರು ಪೊಲೀಸರು ನೀಡುವ ‘ಅಗತ್ಯ ಸೇವೆ ಕ್ಷೇತ್ರದ ಸಿಬ್ಬಂದಿ– ಕರ್ಫ್ಯೂ ಪಾಸ್‌’ ಅನ್ನು ತೋರಿಸಿ ಬಸ್‌ಗಳಲ್ಲಿ ಪ್ರಯಾಣಿಸಬಹುದು. ಪಾಸ್‌ ಇಲ್ಲದವರಿಗೆ ಅವಕಾಶವಿಲ್ಲ. ಇದರ ಜತೆಗೆ ಕೆಲಸ ಮಾಡುತ್ತಿರುವ ಸಂಸ್ಥೆಯ ಐಡಿಕಾರ್ಡ್‌ಗಳನ್ನು ತೋರಿಸಬೇಕು,’ ಎಂದು ಬಿಎಂಟಿಸಿ ತಿಳಿಸಿದೆ.

ಪ್ರಯಾಣಿಕರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆಯೂ, ಹೆಚ್ಚು ಜನರನ್ನು ಬಸ್‌ಗೆ ಹತ್ತಿಸಿಕೊಳ್ಳದಂತೆಯೂ, 20 ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡುವಂತೆಯೂಬಿಎಂಟಿಸಿ ತನ್ನ ಸಿಬ್ಬಂದಿಗೆ ತಿಳಿಸಿದೆ.

ADVERTISEMENT

ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಲು ಯಾರಿಗಿದೆ ಅವಕಾಶ?

–ಬೆಸ್ಕಾಂ, ನೀರು, ಒಳಚರಂಡಿ ಮಂಡಳಿ, ಬಿಎಂಟಿಸಿ, ಸರ್ಕಾರದ ಕೆಲವು ಇಲಾಖೆಗಳ ಸಿಬ್ಬಂದಿ

– ಪೊಲೀಸರು

– ಸರ್ಕಾರಿ, ಖಾಸಗಿ ವೈದ್ಯರು, ನರ್ಸ್‌ಗಳು, ವಾರ್ಡ್‌ ಬಾಯ್‌ಗಳು, ಔಷಧಾಯಲಯಗಳ ಸಿಬ್ಬಂದಿ.

– ಭದ್ರತಾ ಸಿಬ್ಬಂದಿ

– ಬ್ಯಾಂಕ್‌ ನೌಕರರು, ಅಧಿಕಾರಿಗಳು

– ರಕ್ತ ದಾನಿಗಳು

– ಇತ್ಯಾದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.