ADVERTISEMENT

ಬಾಯ್ಲರ್ ಸ್ಫೋಟ: ಒಬ್ಬರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 8 ಜೂನ್ 2019, 16:38 IST
Last Updated 8 ಜೂನ್ 2019, 16:38 IST
ಸ್ಫೋಟದಿಂದ ಬಾಯ್ಲರ್ ಚಾವಣಿಯ ಸಿಮೆಂಟ್ ಶೀಟ್ ಸಿಡಿದು ಬಿದ್ದಿರುವುದು.
ಸ್ಫೋಟದಿಂದ ಬಾಯ್ಲರ್ ಚಾವಣಿಯ ಸಿಮೆಂಟ್ ಶೀಟ್ ಸಿಡಿದು ಬಿದ್ದಿರುವುದು.   

ತುಮಕೂರು: ನಗರದ ಹೊರವಲಯದ ಸತ್ಯಮಂಗಲ ಕೈಗಾರಿಕಾ ಪ್ರದೇಶದ ‘ಬೇಳೂರು ಬಾಯ್ಲರ್ ಬಯೋಟೆಕ್‌’ ಔಷಧಿ ತಯಾರಿಕಾ ಘಟಕದ ಬಾಯ್ಲರ್ ಶನಿವಾರ ಸ್ಫೋಟಗೊಂಡಿದ್ದು ಒಬ್ಬರಿಗೆ ಗಾಯವಾಗಿದೆ.

ಸ್ಫೋಟದ ತೀವ್ರತೆಗೆ ಘಟಕದ ಚಾವಣಿಯ ಸಿಮೆಂಟ್ ಶೀಟ್‌ಗಳು ಸಿಡಿದು ಸುತ್ತಮುತ್ತಲಿನ ಪ್ರದೇಶದಲ್ಲಿ ಬಿದ್ದಿವೆ.

‘ಸ್ಫೋಟದ ವೇಳೆ ಘಟಕದಲ್ಲಿ 10ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಎಂದಿನಂತೆ ಕಾರ್ಯನಿರ್ವಹಿಸುವಾಗ ಒತ್ತಡ ಹೆಚ್ಚಾಗಿ ಬಾಯ್ಲರ್ ಸಿಡಿದಿದೆ’ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ತುಮಕೂರು ನಗರ ಡಿವೈಎಸ್‌ಪಿ ತಿಪ್ಪೇಸ್ವಾಮಿ ತಿಳಿಸಿದರು.

ADVERTISEMENT

‘ಘಟಕದ ಪಕ್ಕವೇ ತೆರಳುತ್ತಿದ್ದ ಜಯರಾಮ್ (47) ಎಂಬುವವರ ಕೈಗೆ ಸಿಮೆಂಟ್ ಶೀಟ್‌ನ ತುಣುಕು ಬಡಿದು ಗಾಯವಾಗಿದೆ. ಕೈಗಾರಿಕೆ ಇಲಾಖೆ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ತಂಡವು ಸ್ಥಳ ಪರಿಶೀಲಿಸಿ ವರದಿ ಕೊಡಲಿದ್ದು, ಬಳಿಕ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.