ADVERTISEMENT

ರಥದ ಚಕ್ರಕ್ಕೆ ಸಿಲುಕಿ ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2020, 20:10 IST
Last Updated 23 ಫೆಬ್ರುವರಿ 2020, 20:10 IST

ಭಾರತೀನಗರ (ಮಂಡ್ಯ): ಸಮೀಪದ ಹನುಂತನಗರದ ಆತ್ಮಲಿಂಗೇಶ್ವರ ಕ್ಷೇತ್ರದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ನಡೆದ ರಥೋತ್ಸವದಲ್ಲಿ ರಥದ ಚಕ್ರಕ್ಕೆ ಸಿಲುಕಿ ಬಾಲಕ ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ.

ಕರಡಕೆರೆ ಗ್ರಾಮದ ಕುಳ್ಳೇಗೌಡ ಅವರ ಪುತ್ರ ಶಿವಕುಮಾರ್ (13) ಮೃತಪಟ್ಟ ಬಾಲಕ. ಅದೇ ಗ್ರಾಮದ ನಾಥೇಗೌಡ ಅವರ ಪುತ್ರ ಲಿಂಗೇಗೌಡ (50) ಅವರ ಕಾಲು ಮುರಿದಿದೆ.

ರಥವನ್ನು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿ ನಿಲ್ಲಿಸಲಾಗಿತ್ತು. ರಥಮನೆಗೆ ರಥವನ್ನು ನಿಲ್ಲಿಸುವಾಗ ಶಿವಕುಮಾರ್ ಚಕ್ರಕ್ಕೆ ಸಿಲುಕಿದ್ದಾನೆ. ಆತನನ್ನು ರಕ್ಷಿಸಲು ಮುಂದಾದ ಲಿಂಗೇಗೌಡ ಅವರ ಕಾಲು ಮುರಿದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.