ADVERTISEMENT

ಬಿಎಸ್‌ಪಿ: 53 ಅಭ್ಯರ್ಥಿಗಳ ಘೋಷಣೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 18:31 IST
Last Updated 28 ಮಾರ್ಚ್ 2023, 18:31 IST
   

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ 53 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮಂಗಳವಾರ ಬಿಡುಗಡೆ ಮಾಡಿದೆ.

ಜಂಟಿ ಸುದ್ದಿಗೋಷ್ಠಿಯಲ್ಲಿ ಮೊದಲ ಪಟ್ಬಿ ಬಿಡುಗಡೆ ಮಾಡಿದ ಬಿಎಸ್‌ಪಿ ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ ಮತ್ತು ರಾಜ್ಯ ಘಟಕದ ಅಧ್ಯಕ್ಷ ಎಂ. ಕೃಷ್ಣಮೂರ್ತಿ, ಏಪ್ರಿಲ್‌ 10ರೊಳಗೆ ಉಳಿದ ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ
ಬಿಡುಗಡೆ ಮಾಡಲಾಗುವುದು’ ಎಂದು ಹೇಳಿದರು.

ಅಭ್ಯರ್ಥಿಗಳು: ಎಂ. ಕೃಷ್ಣಮೂರ್ತಿ (ಮಳವಳ್ಳಿ), ಕೆ.ಬಿ. ವಾಸು (ಗುರುಮಠಕಲ್), ಎನ್. ಮಧು (ಮಧುಗಿರಿ), ಜಿ. ಅಶ್ವಥ್ ನಾರಾಯಣ (ತಿಪಟೂರು), ಹ.ರಾ. ಮಹೇಶ್ (ಚಾಮರಾಜನಗರ), ಗಂಗಾಧರ್ ಬಹುಜನ್ (ಬೇಲೂರು), ಚಿನ್ನಪ್ಪ ಚಿಕ್ಕಹಾಗಡೆ (ಆನೇಕಲ್), ಡಾ. ದಸ್ತಗಿರಿ ಮುಲ್ಲಾ (ಸಿಂದಗಿ), ಕಲ್ಲಪ್ಪ ಆರ್. ತೊರವಿ (ನಾಗಠಾಣ), ಎಲ್.ಆರ್. ಬೋಸ್ಲೆ (ಕಲಬುರಗಿ ದಕ್ಷಿಣ), ಸುನಂದ್ ಎನ್.ಎಚ್ (ರಾಮದುರ್ಗ), ಸಂದೀಪ್ ಮಾರಸಂದ್ರ ಮುನಿಯಪ್ಪ (ಯಲಹಂಕ), ಹರೀಶ್ ಅತ್ನಿ (ಅರಕಲಗೂಡು), ಅಂಕುಶ್ ಗೋಖಲೆ (ಹುಮನಾಬಾದ್), ಕಮಲ್ ನಾಗರಾಜ್ (ಕೊಳ್ಳೇಗಾಲ), ಕಪಿಲ್ ಗೋಡಬಲೆ (ಬೀದರ್ ದಕ್ಷಿಣ), ದೇವೇಂದ್ರಪ್ಪ ಕಟ್ಟಿಮನಿ (ಶಿರಹಟ್ಟಿ), ಮೈಲಾರಿ ಶಳ್ಳಗಿ (ಕಲಬುರಗಿ ಗ್ರಾಮೀಣ), ಪಿ. ಮಹದೇವ್ (ನೆಲಮಂಗಲ), ಕಾಶೀನಾಥ್ ದೊಡ್ಡಮನಿ (ಮುದ್ದೇಬಿಹಾಳ), ಅನಿಲ್ ಕುಮಾರ್ (ಲಿಂಗಸುಗೂರು), ರಂಗಸ್ವಾಮಿ (ಹಿರಿಯೂರು), ಎಲ್.ಬಿ. ರಮೇಶ್ (ಮೂಡಿಗೆರೆ), ಗುಣವಂತ ಸೂರ್ಯವಂಶಿ (ಔರಾದ್), ಬಿ.ಆರ್. ಪುಟ್ಟಸ್ವಾಮಿ (ಟಿ. ನರಸೀಪುರ), ಡಿ. ಹನುಮಂತಪ್ಪ (ಹರಿಹರ), ಎ.ಡಿ. ಶಿವಪ್ಪ (ಶಿವಮೊಗ್ಗ ಗ್ರಾಮೀಣ), ಎಸ್.ಪಿ. ಶಿವಕುಮಾರ್ (ಮದ್ದೂರು), ತಾರೇಶ್ ಎಚ್.ಎಸ್. (ಹೊಳೇನರಸೀಪುರ), ಗೋವಿಂದರಾಜ್ ಎಲ್.ಜಿ. (ಯಶವಂತಪುರ), ಗೌತಮ್ ಬೊಮ್ಮನಹಳ್ಳಿ (ಚಿಂಚೋಳಿ), ಹುಚ್ಚಪ್ಪ ವಟಾರ್ (ಅಫಜಲಪುರ), ಕಿರಣ್ ವಿ. (ಬೆಂಗಳೂರು ದಕ್ಷಿಣ), ಪ್ರೇಮನಾಥ್ ಚಿಕ್ಕತುಂಬಾಳ್ (ಹುಬ್ಬಳ್ಳಿ–ಧಾರವಾಡ ಪೂರ್ವ), ಎಸ್.ಬಿ. ಸುರೇಶ್ (ಕೋಲಾರ), ಚಿಕ್ಕಣ್ಣ (ದಾಸರಹಳ್ಳಿ), ಹುಲುಗಪ್ಪ (ಸಿಂಧನೂರು), ರೇವಣ್ಣ ಸಿದ್ಧಪ್ಪ ಹೊಸಮನಿ (ಹುಬ್ಬಳ್ಳಿ–ಧಾರವಾಡ ಕೇಂದ್ರ), ರಾಮಣ್ಣ (ಮಾಗಡಿ), ಎನ್.ಎಂ. ಕೃಷ್ಣಪ್ಪ (ಕನಕಪುರ),

ADVERTISEMENT

ಚಂದ್ರಶೇಖರಯ್ಯ (ಚನ್ನಪಟ್ಟಣ), ಜ್ಞಾನೇಶ್ವರ್ ಸಿಂಗಾರೆ (ಬಸವಕಲ್ಯಾಣ), ಸುನೀಲ್‌ ಶಂಕರ್ ವಾಗ್ಮೋರೆ (ಕಾಗವಾಡ), ಸ್ವಾಮಿ (ರಾಮನಗರ), ಯಮನಪ್ಪ ತಳವಾರ (ಬೆಳಗಾವಿ ಗ್ರಾಮೀಣ), ಎಚ್.ಎಂ. ವೀರೇಶ್ (ಸಿರಗುಪ್ಪ), ಉತ್ತನೂರ್ ನಾಗರಾಜ್ (ಕಂಪ್ಲಿ), ಶಿವಪುತ್ರಪ್ಪ ಗುಮಗೇರಿ (ಕುಷ್ಟಗಿ), ಕೆ. ಬಾಬು (ಬಳ್ಳಾರಿ ನಗರ), ಡಾ. ನಟರಾಜ್ (ಶಿರಾ), ಭೀಮರಾಯ ನೆಲೋಗಿ (ಜೇವರ್ಗಿ), ಡಿವಿಲ್ ಕುಮಾರ್ (ಮಡಿಕೇರಿ), ಬಿ.ಕೆ. ಹೊನ್ನಯ್ಯ (ಖಾನಾಪುರ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.