ADVERTISEMENT

‘ಸಾಹಿತ್ಯಶ್ರೀ’ ಪ್ರಶಸ್ತಿ ನಿರಾಕರಿಸಿದ ಸಿ.ಪಿ. ಸಿದ್ಧಾಶ್ರಮ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2019, 17:04 IST
Last Updated 9 ಫೆಬ್ರುವರಿ 2019, 17:04 IST
ಪ್ರೊ.ಸಿ.ಪಿ.ಸಿದ್ಧಾಶ್ರಮ
ಪ್ರೊ.ಸಿ.ಪಿ.ಸಿದ್ಧಾಶ್ರಮ   

ಮೈಸೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ 2018ನೇ ಸಾಲಿನ ‘ಸಾಹಿತ್ಯಶ್ರೀ’ ಪ್ರಶಸ್ತಿ ಸ್ವೀಕರಿಸಲು ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಸಿ.ಪಿ.ಸಿದ್ಧಾಶ್ರಮ ನಿರಾಕರಿಸಿದ್ದಾರೆ.

‘ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ನಾಲ್ಕೈದು ಹಿರಿಯ ಸಾಹಿತಿಗಳಿಗೆ ‘ಗೌರವ ಪ್ರಶಸ್ತಿ’ ನೀಡುವ ಸಂಪ್ರದಾಯ ಈ ಹಿಂದೆ ಇತ್ತು. ಈಗ ‘ಗೌರವ ಪ್ರಶಸ್ತಿ’ ಮತ್ತು ‘ಸಾಹಿತ್ಯಶ್ರೀ’ ಪ್ರಶಸ್ತಿ ಎಂದು ಎರಡು ಬಗೆಯಲ್ಲಿ ಭೇದ ಕಲ್ಪಿಸಿ ಪ್ರಶಸ್ತಿ ನೀಡುತ್ತಿರುವುದು ಸಮಂಜಸವಾದುದಲ್ಲ. ಸಾಹಿತಿಗಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಿ ಪ್ರಶಸ್ತಿ ಕೊಡುತ್ತಿರುವುದು ತಾತ್ವಿಕವಾಗಿ ಸರಿಯಾದ ಕ್ರಮವಲ್ಲ. ಹೀಗಾಗಿ, ಈ ಪ್ರಶಸ್ತಿ ಸ್ವೀಕರಿಸಲು ನನ್ನ ಮನಸ್ಸು ಒಪ್ಪುತ್ತಿಲ್ಲ’ ಎಂದಿದ್ದಾರೆ.‌

‘ಗೌರವ ಪ್ರಶಸ್ತಿ’ಗೆ ಆಯ್ಕೆಯಾದ ಐವರಲ್ಲಿ ಒಂದಿಬ್ಬರು ಆ ಪ್ರಶಸ್ತಿಗೆ ನಿಜವಾಗಿಯೂ ಅರ್ಹರೇ ಎಂಬ ಪ್ರಶ್ನೆ ಸಹಜವಾಗಿ ನನ್ನನ್ನು ಮತ್ತೆ ಮತ್ತೆ ಕಾಡಿದೆ. ಹಾಗೆಯೇ ‘ಸಾಹಿತ್ಯಶ್ರೀ’ ಪ್ರಶಸ್ತಿಗೆ ಆಯ್ಕೆಯಾದ ಹತ್ತು ಜನರಲ್ಲಿ ಕೆಲವರು ‘ಗೌರವ ಪ್ರಶಸ್ತಿ’ಗೆ ಅರ್ಹರಾಗಿರುವಂಥವರು. ಆದುದರಿಂದ ಆಯ್ಕೆಯ ಈ ಅಸಮಂಜಸ ತಾರತಮ್ಯ ನನ್ನನ್ನು ಬಹುವಾಗಿ ಕಾಡಿದೆ, ನೋಯಿಸಿದೆ’ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.