ADVERTISEMENT

ನವೀಕರಿಸಬಹುದಾದ ಹೊಸ ಇಂಧನ ನೀತಿಗೆ ಸಂಪುಟ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2022, 20:00 IST
Last Updated 30 ಮಾರ್ಚ್ 2022, 20:00 IST
   

ಬೆಂಗಳೂರು: ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲು ‘ಕರ್ನಾಟಕ ನವೀಕರಿಸಬಹುದಾದ ಇಂಧನ ನೀತಿ 2022–27’ ಕ್ಕೆ ಬುಧವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ರಾಜ್ಯದಲ್ಲಿ ಇನ್ನೂ 1,55,074 ಮೆ.ವ್ಯಾ.ಗಳಷ್ಟು ವಿದ್ಯುತ್ ಪಡೆಯಲು ಸಾಧ್ಯವಾಗುವ ನವೀಕರಿಸಬಹುದಾದ ಇಂಧನ ಮೂಲಗಳಿವೆ. ಆ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿದ್ದೇ ಆದಲ್ಲಿ ದೇಶದಲ್ಲೇ ಕರ್ನಾಟಕ ಮುಂಚೂಣಿಗೆ ತಲುಪಬಹುದು. ಈ ನೀತಿಯು ಅಧಿಸೂಚನೆ ಹೊರಡಿಸಿದ ದಿನದಿಂದ 5 ವರ್ಷಗಳವೆರಗೆ ಜಾರಿ ಇರುತ್ತದೆ. ರಾಜ್ಯದಲ್ಲಿ ಸುಸ್ಥಿರ ಮತ್ತು ಹಸಿರು ಇಂಧನ ಬೆಳವಣಿಗೆಗೆ ಅವಕಾಶ ಸಿಗಲಿದೆ.

ನೀತಿಯ ಮುಖ್ಯ ಅಂಶಗಳು:

ADVERTISEMENT

lಒಂದು ಗಿಗಾ ವಾಟ್‌ ಸಾಮರ್ಥ್ಯದ ಸೌರ ಮೇಲ್ಛಾವಣಿ ದ್ಯುತಿ ವಿದ್ಯುತ್‌ಜನಕ (ಫೋಟೊವೋಲ್ಟಿಕ್) ಯೋಜನೆ ಒಳಗೊಂಡಂತೆ ರಾಜ್ಯದಲ್ಲಿ ಇಂಧನ ಶೇಖರಣೆಗೆ ವ್ಯವಸ್ಥೆ ಅಥವಾ 10 ಗಿಗಾ ವ್ಯಾಟ್‌ ಹೆಚ್ಚುವರಿ ನವೀಕರಿಸಬಹುದಾದ ಯೋಜನೆಗಳ ಅಭಿವೃದ್ಧಿಗೆ ಅನುಕೂಲ ಕಲ್ಪಿಸುವುದು.

l→ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೂಡಿಕೆಯನ್ನು ಆಕ
ರ್ಷಿಸುವುದು. ಈ ಮೂಲಕ ರಾಜ್ಯದ ಆರ್ಥಿಕತೆ ಅಭಿವೃದ್ಧಿಪಡಿಸುವುದು.

lಇತರ ರಾಜ್ಯಗಳಿಗೆ ಹೆಚ್ಚುವರಿ ವಿದ್ಯುತ್‌ ರಫ್ತು ಮಾಡುವುದು. ಕಾಲ ಕಾಲಕ್ಕೆ ಕೆಇಆರ್‌ಸಿ ನಿರ್ದಿಷ್ಟಪಡಿಸಿದ ಆರ್‌ಪಿಒ ಗುರಿ ಸಾಧಿಸುವುದು.

l→ರಾಜ್ಯದಲ್ಲಿ ಹೈಬ್ರೀಡ್‌ ಪಾರ್ಕ್‌ಗಳು ಸೇರಿದಂತೆ ನವೀಕರಿಸಬಹುದಾದ ಇಂಧನ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸುವುದು. ಹಸಿರು ಇಂಧನ ಕಾರಿಡಾರ್‌ ಯೋಜನೆಗಳಲ್ಲಿ ಖಾಸಗಿ ವಲಯದ ಹೂಡಿಕೆಗೆ ಉತ್ತೇಜನ ನೀಡುವುದು.

l→ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದಿಸುವ ಯೋಜನೆಗಳು, ಕಿರು ಮತ್ತು ಸಣ್ಣ ಜಲ ವಿದ್ಯುತ್‌ ಯೋಜನೆಗಳು, ಹೊಸ ತಾಂತ್ರಿಕಕತೆ ಹೊಂದಿರುವ, ಪ್ರಾಯೋಗಿಕ ಯೋಜನೆಗಳು, ಸಂಶೋಧನೆ ಮತ್ತು ಅಭಿವೃದ್ಧಿಗೆ ಒತ್ತು.

ಪ್ರಮುಖ ತೀರ್ಮಾನಗಳು

lಧಾರವಾಡದಕೃಷಿ ವಿಶ್ವವಿದ್ಯಾಲಯದಲ್ಲಿ ‘ಸೆಂಟರ್‌ ಆಫ್‌ ಎಕ್ಸಲೆನ್ಸ್ ಇನ್ ಸ್ಮಾರ್ಟ್‌ ಅಗ್ರಿಕಲ್ಚರ್‌’ ಅನ್ನು ನಿರ್ಮಿಸಲು ಉದ್ದೇಶಿಸಿದ್ದು, ಇದಕ್ಕಾಗಿ ₹51.20 ಕೋಟಿ ವೆಚ್ಚ ಮಾಡಲಾಗುತ್ತಿದೆ. ಇದಕ್ಕೆ ಕೇಂದ್ರ ಶೇ 60 ಮತ್ತು ರಾಜ್ಯ ಶೇ 40 ರಷ್ಟು ಅನುದಾನ ನೀಡಲಿವೆ.

lಅಕ್ರಮ ಗಣಿಗಾರಿಕೆಗಳ ತನಿಖೆಗೆ ಕರ್ನಾಟಕ ಲೋಕಾಯುಕ್ತ ಸಂಸ್ಥೆ ರಚಿಸಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ಕಾರ್ಯಾವಧಿಯನ್ನು ಇನ್ನೂ ಒಂದು ವರ್ಷ ಅವಧಿಗೆ ಮುಂದುವರಿಕೆ.

lರಾಯಚೂರಿನ ಗ್ರೀನ್‌ಫೀಲ್ಡ್‌ ದೇಶೀಯ ಪ್ರಯಾಣಿಕ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಸಂಬಂಧಿಸಿದಂತೆ ಮೆ.ರೈಟ್ಸ್‌ ಇಂಡಿಯಾ ಲಿ. ಸಿದ್ಧಪಡಿಸಿರುವ ₹185.57 ಕೋಟಿ ವಿಸ್ತೃತ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ.

lರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ 114 ಜೀವಾವಧಿ ಶಿಕ್ಷಾ ಬಂಧಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲು ತೀರ್ಮಾನ.

lಬೆಂಗಳೂರಿನ ನೃಪತುಂಗಾ ವಿಶ್ವವಿದ್ಯಾಲಯಕ್ಕೆ ಉಪಕರಣ ಖರೀದಿ, ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಮತ್ತು ಹಳೇ ಕಟ್ಟಡ ನವೀಕರಣ ಕಾಮಗಾರಿಯ ₹55 ಕೋಟಿ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಒಪ್ಪಿಗೆ.

lಉಡುಪಿಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ 200 ಹಾಸಿಗೆಗಳ ಕೂಸಮ್ಮ ಶಂಭುಶೆಟ್ಟಿ ಮೆಮೋರಿಯಲ್‌ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಲು ಒಪ್ಪಿಗೆ. ರಾಮನಗರ ಜಿಲ್ಲಾ ಆಸ್ಪತ್ರೆ ನಿರ್ಮಾಣ ಕಾಮಗಾರಿಯ ಪರಿಷ್ಕೃತ ಅಂದಾಜು ಮೊತ್ತ ₹99.93 ಕೋಟಿಗೆ ಆಡಳಿತಾತ್ಮಕ ಅನುಮೋದನೆ.

lಎನ್‌ಡಿಆರ್‌ಎ–27 ರಡಿ ಅನುಮೋದನೆಯಾಗಿರುವ 4 ಸೇತುವೆಗಳ ನಿರ್ಮಾಣ ಕಾಮಗಾರಿಯನ್ನು ದಕ್ಷಿಣಕನ್ನಡ, ಚಿಕ್ಕಮಗಳೂರು, ಉಡುಪಿ, ಉತ್ತರಕನ್ನಡ ಜಿಲ್ಲೆಯಲ್ಲಿ ಒಟ್ಟು ₹66.88 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.