ADVERTISEMENT

ಔಷಧ ಖರೀದಿಗೆ ₹880 ಕೋಟಿ: ಸಚಿವ ಸಂಪುಟ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 0:07 IST
Last Updated 25 ಜುಲೈ 2025, 0:07 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬೆಂಗಳೂರು: 2025–26ರ ಸಾಲಿಗೆ ₹880.68 ಕೋಟಿ ವೆಚ್ಚದಲ್ಲಿ 890 ಔಷಧಗಳು, ಮಾತ್ರೆಗಳು, ರಾಸಾಯನಿಕ ಗಳನ್ನು ಖರೀದಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಸಭೆ ಬಳಿಕ ಗುರುವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಕಾನೂನು ಸಚಿವ ಎಚ್‌.ಕೆ. ಪಾಟೀಲ, ‘ಔಷಧಗಳ ದರ ಪರಿಗಣನೆಗಾಗಿ ಪ್ರಸಕ್ತ ಔಷಧಿಗಳಿಗೆ ಅನ್ವಯಿಸುವ ಹಿಂದಿನ ದರ, ಅಂದಾಜು ದರವನ್ನು ಆಧಾರವಾಗಿಟ್ಟುಕೊಂಡು ಹೊಸ ದರ ನಿರ್ಧರಿಸಲಾಗಿದೆ. ಹೊಸ ಔಷಧಗಳಿಗೆ ಅನ್ವಯಿಸುವ ಇತರೆ ರಾಜ್ಯಗಳ ವೈದ್ಯಕೀಯ ಸರಬರಾಜು ನಿಗಮಗಳಲ್ಲಿ ಖರೀದಿಸಿದ ಕನಿಷ್ಠ ದರ ಗಳು ಅಥವಾ ಮಾರುಕಟ್ಟೆಯ ಶೇ 40ರ ದರದಂತೆ ಪರಿಗಣಿಸಿ ಔಷಧ ಖರೀದಿ ಸಲು ಪ್ರಸ್ತಾಪಿಸಲಾಗಿದೆ’ ಎಂದರು.

ADVERTISEMENT

ಖಾಸಗಿ ಆಂಬುಲೆನ್ಸ್‌ ಸೇವಾ ನಿರ್ವಾಹಕರನ್ನು ನಿಯಂತ್ರಿಸಲು ಮತ್ತು ಸಂಚಾರಿ ವೈದ್ಯಕೀಯ ಘಟಕಗಳನ್ನು ಖಾಸಗಿ ವೈದ್ಯಕೀಯ ಸಂಸ್ಥೆ ಎಂದು ನೋಂದಾಯಿಸುವುದು ಅಗತ್ಯವಿದೆ. 30 ದಿನಗಳೊಳಗೆ ಕಾಯಂ ನೋಂದಣಿ ನೀಡಲು ಈ ತಿದ್ದುಪಡಿ ಮಾಡಲಾಗಿದೆ ಎಂದು ಪಾಟೀಲ ತಿಳಿಸಿದರು.

ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಸ್ಥಾಪಿಸಲು ಹೆಚ್ಚುವರಿಯಾಗಿ ಅವಶ್ಯವಿರುವ ವೈದ್ಯಕೀಯ ಉಪಕರಣ, ಪೀಠೋಪಕರಣ ಹಾಗೂ ಇತರೆ ಬಾಬ್ತುಗಳ ಒಟ್ಟು ₹62 ಕೋಟಿಗಳಿಗೆ ಅನುಮೋದನೆ ನೀಡಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.