ADVERTISEMENT

ಬಂಡವಾಳ ವೆಚ್ಚದ ₹ ₹5,299 ಕೋಟಿ ‘ಗ್ಯಾರಂಟಿ’ಗೆ: ಸಿಎಜಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 20:17 IST
Last Updated 19 ಆಗಸ್ಟ್ 2025, 20:17 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಬೆಂಗಳೂರು: 2023–24ರಲ್ಲಿ ಮೂಲಸೌಕರ್ಯಕ್ಕಾಗಿ ನಿಗದಿ ಮಾಡಿದ ಬಂಡವಾಳ ವೆಚ್ಚದಲ್ಲಿ ₹5,299 ಕೋಟಿಯನ್ನು ಗ್ಯಾರಂಟಿ ಯೋಜನೆಗಳಿಗಾಗಿ ಬಳಸಲಾಗಿದೆ ಎಂದು ಭಾರತದ ಮಹಾಲೇಖಪಾಲರ (ಸಿಎಜಿ) ವರದಿ ಹೇಳಿದೆ.

2023–24 ಕೊನೆಗೊಂಡ ವರ್ಷದ ಸಿಎಜಿ ವರದಿಯನ್ನು ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಲಾಯಿತು.

ADVERTISEMENT

ಕಾಂಗ್ರೆಸ್‌ ನೇತೃತ್ವದ ಸರ್ಕಾರದ ಮೊದಲ ವರ್ಷದಲ್ಲಿ( 2023–24) ₹52,120 ಕೋಟಿ ಬಂಡವಾಳ ವೆಚ್ಚ ಮಾಡಲಾಗಿದ್ದು, ಇದು ಒಟ್ಟು ವೆಚ್ಚದ ಪೈಕಿ ಶೇ 17 ರಷ್ಟಿದೆ. ಹಿಂದಿನ ಸಾಲಿನಲ್ಲಿ(2022–23) ಬಂಡವಾಳ ವೆಚ್ಚ ₹57,349 ಕೋಟಿ ಇತ್ತು. ಹಿಂದಿನ ಸಾಲಿಗಿಂತ ₹5,299 ಕೋಟಿ ಕಡಿಮೆ ಆಗಿದೆ ಎಂದು ವರದಿ ವಿವರಿಸಿದೆ.

ಸರ್ಕಾರದ ಐದು ‘ಗ್ಯಾರಂಟಿ’ ಯೋಜನೆಗಳು 2023–24 ಸಾಲಿನಲ್ಲಿ ರಾಜಸ್ವ ವೆಚ್ಚದ ಶೇ 15ರಷ್ಟು ಪಾಲು ಹೊಂದಿವೆ. ಇದರಿಂದಾಗಿ ವೆಚ್ಚದ ಬೆಳವಣಿಗೆ ಏರಿಕೆಯಾಗಿದೆ. ಇದರ ಪರಿಣಾಮ ₹9,271 ಕೋಟಿ ರಾಜಸ್ವ ಕೊರತೆಯಾತುತಯ. ವಿತ್ತೀಯ ಕೊರತೆ 2022–23 ರಲ್ಲಿ ₹46,623 ಕೋಟಿ ಇತ್ತು. 2023–24 ರಲ್ಲಿ ₹65,522 ಕೋಟಿಗೆ ಏರಿಕೆಯಾಗಿದೆ ಎಂದು ವರದಿ ಹೇಳಿದೆ.

ಗ್ಯಾರಂಟಿ ಯೋಜನೆಗಳು ಮತ್ತು ಅದರಿಂದ ಉಂಟಾದ ಕೊರತೆಗಳಿಗೆ ಹಣಕಾಸು ಒದಗಿಸಲು ರಾಜ್ಯ ಸರ್ಕಾರ ₹63,000 ಕೋಟಿ ಸಾಲ ಪಡೆದುಕೊಂಡಿದೆ. ಇದು ಕಳೆದ ವರ್ಷದ ನಿವ್ವಳ ಸಾಲಕ್ಕಿಂತ (₹26,000 ಕೋಟಿ) ₹37,000 ಕೋಟಿ ಹೆಚ್ಚಾಗಿದೆ ಎಂದು ವರದಿ ಬೊಟ್ಟು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.