ADVERTISEMENT

‘ಕಮಲಿ’ ವಂಚನೆ; ಕಮಿಷನರ್‌ಗೆ ದೂರು

​ಪ್ರಜಾವಾಣಿ ವಾರ್ತೆ
Published 14 ಜನವರಿ 2020, 20:00 IST
Last Updated 14 ಜನವರಿ 2020, 20:00 IST

ಬೆಂಗಳೂರು: ‘ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುವ ‘ಕಮಲಿ’ ಧಾರಾವಾಹಿಯ ನಿರ್ದೇಶಕ ಅರವಿಂದ್ ‌ಕೌಶಿಕ್ ನನ್ನಿಂದ ಲಕ್ಷಾಂತರ ರೂಪಾಯಿ ಪಡೆದು ವಾಪಸು ನೀಡದೇ ವಂಚಿಸಿದ್ದಾನೆ’ ಎಂದು ಆರೋಪಿಸಿ ನಿರ್ಮಾಪಕ ರೋಹಿತ್ ಎಂಬುವರು ನಗರ ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿದ್ದಾರೆ.

ಕಮಿಷನರ್ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಿರುವ ರೋಹಿತ್, ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

‘ಧಾರಾವಾಹಿ ಆರಂಭಿಸಲು ಹಣ ಹೂಡಿಕೆ ಮಾಡಿದ್ದೆ. 2018ರ ಮೇ 28ರಿಂದ ಧಾರಾವಾಹಿ ಆರಂಭವಾಗಿತ್ತು. 287 ಸಂಚಿಕೆಗಳ ನಂತರ ನನ್ನ ಹೆಸರನ್ನು ಟೈಟಲ್‌ ಕಾರ್ಡ್‌ನಿಂದ ತೆಗೆಯಲಾಗಿದೆ. ರೋಹಿತ್ ಅವರೇ ನಿರ್ಮಾಪಕ ಎಂದು ತೋರಿಸಲಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಕೌಶಿಕ್ಯಾವುದೇ ಉತ್ತರ ನೀಡುತ್ತಿಲ್ಲ’ ಎಂದು ರೋಹಿತ್ ದೂರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.