ADVERTISEMENT

ಮುಷ್ಕರ ನಷ್ಟ ವಸೂಲಿಗೆ ಸಾರಿಗೆ ನೌಕರರ ವಿರುದ್ಧ ದಾವೆ: ಹೈಕೋರ್ಟ್‌ಗೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 17:43 IST
Last Updated 14 ಸೆಪ್ಟೆಂಬರ್ 2021, 17:43 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನೌಕರರು ನಡೆಸಿದ ಮುಷ್ಕರದಿಂದ ಆಗಿರುವ ನಷ್ಟ ವಸೂಲಿ ಸಂಬಂಧ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ದಾವೆ ಹೂಡಲಾಗಿದೆ ಎಂದು ಸಾರಿಗೆ ಸಂಸ್ಥೆಗಳ ಪರ ವಕೀಲರು ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.

ನಷ್ಟವನ್ನು ನೌಕರರಿಂದಲೇ ವಸೂಲಿ ಮಾಡುವಂತೆ ಕೋರಿ ಸಮಪರ್ಣಾ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಆಕ್ಷೇಪಣೆ ಸಲ್ಲಿಸಿದ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಪರ ವಕೀಲರು, ‘3,676 ನೌಕರರು ಮುಷ್ಕರದಲ್ಲಿ ಭಾಗಿಯಾಗಿದ್ದು, 23 ಬಸ್‌ಗಳಿಗೆ ಹಾನಿಯಾಗಿದೆ. 12 ಎಫ್‌ಐಆರ್ ಮತ್ತು 11 ಎನ್‌ಸಿಆರ್ ದಾಖಲಾಗಿವೆ. ₹2.66 ಕೋಟಿ ನಷ್ಟವಾಗಿದ್ದು, ವಸೂಲು ಮಾಡಲು ದಾವೆ ಹೂಡಲಾಗಿದೆ’ ಎಂದು ವಿವರಿಸಿದರು.

ADVERTISEMENT

‘ಒಟ್ಟು 2,494 ನೌಕರರನ್ನು ಅಮಾನತು ಮಾಡಲಾಗಿತ್ತು. 2,421 ನೌಕರರ ಅಮಾನತು ಆದೇಶ ಹಿಂಪಡೆ
ಯಲಾಗಿದೆ. ಮುಷ್ಕರದಲ್ಲಿ ಭಾಗಿಯಾದ ನೌಕರರ ವಿರುದ್ಧ ಶಿಸ್ತು ಕ್ರಮ ಪ್ರಕ್ರಿಯೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು. ಆಕ್ಷೇಪಣೆ ಪರಿಶೀಲಿಸಿದ ಪೀಠ, ಅರ್ಜಿ ಇತ್ಯರ್ಥಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.