ADVERTISEMENT

ಮೊದಲ ದಿನವೇ ಠುಸ್‌, ಕಾಂತರಾಜ್‌ ವರದಿಯಂತೆ ಇದೂ ಕಸದ ಬುಟ್ಟಿಗೆ: ಸಮೀಕ್ಷೆಗೆ BJP

ಜಾತಿವಾರು ಸಮೀಕ್ಷೆ ಬಗ್ಗೆ ರಾಜ್ಯ ಬಿಜೆಪಿ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಸೆಪ್ಟೆಂಬರ್ 2025, 7:51 IST
Last Updated 23 ಸೆಪ್ಟೆಂಬರ್ 2025, 7:51 IST
<div class="paragraphs"><p>ಸಿದ್ದರಾಮಯ್ಯ&nbsp;, ಮುಖ್ಯಮಂತ್ರಿ</p></div>

ಸಿದ್ದರಾಮಯ್ಯ , ಮುಖ್ಯಮಂತ್ರಿ

   

ಬೆಂಗಳೂರು: ಜಾತಿಗಣತಿ ಎಂಬ ನಾಟಕ ಮೊದಲ ದಿನವೇ ಠುಸ್‌ ಆಗಿದೆ ಎಂದು ಬಿಜೆಪಿ ಕುಹಕವಾಡಿದೆ.

ಈ ಕುರಿತು ಎಕ್ಸ್‌ನಲ್ಲಿ ಪೊಸ್ಟ್ ಹಂಚಿಕೊಂಡಿರುವ ಬಿಜೆಪಿ ಕರ್ನಾಟಕ, ಸರ್ವರ್‌ ಸಮಸ್ಯೆ, ಒಟಿಪಿ ಸಮಸ್ಯೆ, ಅಪ್ಲಿಕೇಶನ್‌ ಡೌನ್‌ಲೋಡ್‌ ಆಗದೆ ಸಮಸ್ಯೆ, UHID ಹೊಂದಾಣಿಕೆ ಆಗದೆ ಸಮಸ್ಯೆ, ಶಿಕ್ಷಕರಿಗೆ ಕಿಟ್ ಸಿಗದೆ ಸಮಸ್ಯೆ, ಕೆಲ ಪ್ರಶ್ನೆಗಳು ಅಪ್ಲಿಕೇಶನ್‌ನಲ್ಲಿ ಕಾಣದೆ ಸಮಸ್ಯೆ ಸಮಸ್ಯೆ ಎಂದು ವ್ಯಂಗ್ಯವಾಡಿದೆ.

ADVERTISEMENT

ಸಿದ್ದರಾಮಯ್ಯನವರೇ, ಅಧಿಕಾರ ಉಳಿಸಿಕೊಳ್ಳಲು ರೂಪಿಸಿರುವ ಜಾತಿಗಣತಿ ಎಂಬ ನಾಟಕ ಮೊದಲ ದಿನವೇ ಠುಸ್‌ ಆಗಿದೆ ಎಂದು ಮೂದಲಿಸಿದೆ.

ಕಾಂತರಾಜ್‌ ವರದಿ ಹಾಗೂ ಜಯಪ್ರಕಾಶ್‌ ಹೆಗ್ಡೆ ವರದಿಗೆ ಗತಿ ಕಾಣಿಸಿದಂತೆಯೇ 2025ರ ಜಾತಿಗಣತಿಯನ್ನು ಕಸದ ಬುಟ್ಟಿಗೆ ಎಸೆಯುವುದಕ್ಕೆ ʼಸಿದ್ಧʼರಾಗಿದ್ದೀರಿ! ಇಷ್ಟೆಲ್ಲಾ ಸಮಸ್ಯೆಗಳಿಗೆ ಮೂಲ ಕಾರಣವೇ ತಮ್ಮ ಅಧಿಕಾರ ದಾಹ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ರಾಜ್ಯ ಸರ್ಕಾರ ಒಬಿಸಿ ಆಯೋಗದಿಂದ ನಿನ್ನೆಯಿಂದ ಜಾತಿವಾರು ಸಮೀಕ್ಷೆ ಆರಂಭಿಸಿದೆ. ಮೊದಲ ದಿನ ಕೇವಲ 10 ಸಾವಿರ ಜನರ ಸಮೀಕ್ಷೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.