ದಿನೇಶ್ ಗುಂಡೂರಾವ್
ಮಂಗಳೂರು: ‘ಮತಾಂತರಗೊಂಡು ಕ್ರೈಸ್ತರಾದವರ ಜೊತೆ ಜಾತಿಗಳ ಹೆಸರನ್ನು ಸರ್ಕಾರವಾಗಲಿ, ಆಯೋಗವಾಗಲಿ ಸೇರಿಸಿದ್ದಲ್ಲ. ಜನರೇ ಹೇಳಿಕೊಂಡಿರುವ ಹೆಸರುಗಳು ದಾಖಲಾಗಿವೆಯಷ್ಟೇ’ ಎಂದು ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು.
ನಗರದಲ್ಲಿ ಭಾನುವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ಬ್ರಾಹ್ಮಣ ಕ್ರೈಸ್ತ ಮತ್ತಿತರ ಹೆಸರುಗಳಿಗೆ ಸಂಬಂಧಿಸಿದಂತೆ ಕೇಳಿಬರುತ್ತಿರುವ ಆಕ್ಷೇಪಗಳ ಕುರಿತ ಪ್ರಶ್ನೆಗೆ ಉತ್ತರಿಸಿ, ‘ಇದರಲ್ಲಿ ಗೊಂದಲ ಇಲ್ಲ. ಆದ್ದರಿಂದ ಸಮೀಕ್ಷೆ ಸುಗಮವಾಗಿ ನಡೆಯಲಿದೆ’ ಎಂದರು.
‘ಅಷ್ಟಕ್ಕೂ ಇದು ಜಾತಿ ಸಮೀಕ್ಷೆ ಅಲ್ಲ, ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದವರನ್ನು ಪತ್ತೆ ಮಾಡಿ ಅಭಿವೃದ್ಧಿ ಕಡೆಗೆ ನಡೆಸುವ ಪ್ರಯತ್ನ. ಇದರ ವಿರುದ್ಧ ಮಾತನಾಡುವವರು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿರುವ ಜಾತಿವಾರು ಸಮೀಕ್ಷೆ ಬಗ್ಗೆ ಮೌನವಾಗಿರುವುದು ಯಾಕೆ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.