ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ
ಯಲ್ಲಾಪುರ: ‘ಸರ್ಕಾರ ಕೈಗೊಂಡಿರುವ ಜಾತಿ ಸಮೀಕ್ಷೆ ಸಮಾಜ ದಲ್ಲಿ ಅಶಾಂತಿ, ಅರಾಜಕತೆ ಸೃಷ್ಟಿಸುವ ಪ್ರಯತ್ನವಾಗಿದೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ದೂರಿದರು.
‘ಈ ಜಾತಿ ಸಮೀಕ್ಷೆ ಗೊಂದಲದ ಗೂಡಾಗಿದೆ. ಆಡಳಿತದಲ್ಲಿ ಅರಾಜಕತೆ, ಜನರಲ್ಲಿ ಅಶಾಂತಿ ಮತ್ತು ಅಸ್ಥಿರತೆ ಸೃಷ್ಟಿಸುವುದೇ ಅವರ ಗುರಿ’ ಎಂದು ಅವರು ಶುಕ್ರವಾರ ತಿಳಿಸಿದರು.
‘ಧರ್ಮಸ್ಥಳ ಕ್ಷೇತ್ರದ ಬುರುಡೆ ಪ್ರಕರಣ ಇದರ ಒಂದು ಭಾಗ. ಅರಾಜಕತೆ ಸೃಷ್ಟಿಸಲು ನಿರಂತರ ಪ್ರಯತ್ನ ನಡೆಸಿವೆ. ಇದು ಅಂತರರಾಷ್ಟ್ರೀಯ ಪಿತೂರಿ. ವಿದೇಶಿ ಶಕ್ತಿಗಳ ಕೈಗೊಂಬೆಯಾದ ಕಾಂಗ್ರೆಸ್, ದೇಶದ ವಿರುದ್ಧ ಕೆಲಸ ಮಾಡುತ್ತಿದೆ. ಎಲ್ಲರೂ ದೇಶ ಮೊದಲು ಎನ್ನುವ ಭಾವದಲ್ಲಿರುವಾಗ ಅವರದ್ದೇ ಒಂದು ಬೇರೆ ದಾರಿಯಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.