ADVERTISEMENT

ಗೋವಾ ಕ್ಯಾಸಿನೊಗೆ ಸಿಸಿಬಿ ತಂಡ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2020, 19:12 IST
Last Updated 15 ಸೆಪ್ಟೆಂಬರ್ 2020, 19:12 IST

ಹುಬ್ಬಳ್ಳಿ: ನಟಿ ರಾಗಿಣಿ ದ್ವಿವೇದಿ ಅವರ ಜೊತೆಗೆ ತೆಗೆಸಿಕೊಂಡಿದ್ದ ಫೋಟೊಗಳನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದ, ಹುಬ್ಬಳ್ಳಿ– ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಗಿರೀಶ ಗದಿಗೆಪ್ಪಗೌಡರ ಬಗ್ಗೆ ಇನ್ನಷ್ಟು ಮಾಹಿತಿ ಕಲೆಹಾಕಲು ನಗರ ಸಿಸಿಬಿ ಪೊಲೀಸರ ತಂಡ ಗೋವಾಕ್ಕೆ ಹೋಗಿ ಬಂದಿದೆ.

‘ಗೋವಾದ ಕ್ಯಾಸಿನೊ ಒಂದರಲ್ಲಿ ಮಾಹಿತಿಗಾಗಿ ಜಾಲಾಡಿದ್ದಾರೆ. ಏನೂ ದಾಖಲೆಗಳು ಸಿಕ್ಕಿಲ್ಲ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇತ್ತೀಚೆಗೆ ಗದಿಗೆಪ್ಪಗೌಡರ ಅವರನ್ನು ವಿಚಾರಣೆಗೆ ಒಳಪಡಿಸಿದ್ದ ಪೊಲೀಸರು, ಕೆಲವು ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT