ADVERTISEMENT

ಸಿ.ಡಿ ಪ್ರಕರಣ: ಸಂತ್ರಸ್ತೆಯಿಂದ ಹೈಕೋರ್ಟ್‌ನಲ್ಲಿ ತಕರಾರು ಅರ್ಜಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 21:41 IST
Last Updated 14 ಜೂನ್ 2021, 21:41 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಷಡ್ಯಂತ್ರ ನಡೆಸಿ ಸಿ.ಡಿ ಬಹಿರಂಗಪಡಿಸಲಾಗಿದೆ ಎಂದು ಆರೋಪಿಸಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ದಾಖಲಿಸಿರುವ ಎಫ್‌ಐಆರ್ ಪ್ರಶ್ನಿಸಿ, ಈ ಪ್ರಕರಣದ ಸಂತ್ರಸ್ತೆ ಹೈಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನಿಲ್‌ ದತ್ ಯಾದವ್ ಅವರು, ಎಸ್ಐಟಿ ಮತ್ತು ರಮೇಶ ಜಾರಕಿಹೊಳಿ ಅವರಿಗೆ ತುರ್ತು ನೋಟಿಸ್ ನೀಡಲು ಆದೇಶಿಸಿ ವಿಚಾರಣೆ
ಯನ್ನು ಜೂ.21ಕ್ಕೆ ಮುಂದೂಡಿತು.

‘ಸಿ.ಡಿ ಬಹಿರಂಗೊಂಡ ಸಂದರ್ಭ
ದಲ್ಲಿ ಅದೊಂದು ತಿರುಚಿದ ವಿಡಿಯೊ, ಸಿ.ಡಿಯಲ್ಲಿರುವ ಯುವತಿಗೂ ತನಗೂ ಸಂಬಂಧ ಇಲ್ಲ ಎಂದು ತಿಳಿಸಿದ್ದ ಜಾರಕಿಗೊಳಿ, 2021ರ ಮಾ.13
ರಂದು ದೂರು ದಾಖಲಿಸಿದ್ದರು. ಮಾ.9ರಂದು ಗೃಹ ಸಚಿವರಿಗೆ ಜಾರಕಿಹೊಳಿ ಪತ್ರವನ್ನೂ ಬರೆದಿದ್ದರು. ಅದನ್ನು ಆಧರಿಸಿ, ಗೃಹ ಸಚಿವರ ಸೂಚನೆ
ಯಂತೆ ನಗರ ಪೊಲೀಸ್ ಆಯುಕ್ತರು ಮಾ.11ರಂದೇ ಎಸ್‌ಐಟಿ ರಚಿಸಿದ್ದಾರೆ. ಇದನ್ನು ಗಮನಿಸಿದರೆ ಜಾರಕಿಹೊಳಿ ಎಷ್ಟು ಪ್ರಭಾವಿ ಎಂಬುದು ಗೊತ್ತಾಗು
ತ್ತದೆ. ಎಸ್‌ಐಟಿ ಕೂಡ ಪ್ರಭಾವಕ್ಕೆ ಒಳ
ಗಾಗಿದೆ ಎಂಬುದು ತಿಳಿಯುತ್ತದೆ’ ಎಂದು ಸಂತ್ರಸ್ತೆ ಅರ್ಜಿಯಲ್ಲಿ ದೂರಿದ್ದಾರೆ.

ADVERTISEMENT

‘ದೂರು ದಾಖಲಿಸಿ 70 ದಿನಗಳ ಬಳಿಕ ಸಿ.ಡಿಯಲ್ಲಿರುವುದು ನಾನೇ ಎಂದು ರಮೇಶ ಜಾರಕಿಹೊಳಿ ಎಸ್‌ಐಟಿ ಮುಂದೆ ಒಪ್ಪಿಕೊಂಡಿದ್ದಾರೆ. ಒಪ್ಪಿತ ಲೈಂಗಿಕ ಕ್ರಿಯೆ ನಡೆಸಲಾಗಿದೆ ಎಂದೂ ತಿಳಿಸಿದ್ದಾರೆ. ಸಿ.ಡಿ ಬಹಿರಂಗ ಆದಾಗ ನೀಡಿದ ಹೇಳಿಕೆ ಮತ್ತು ನಂತರ ನೀಡಿದ ಹೇಳಿಕೆ ತದ್ವಿರುದ್ಧವಾಗಿವೆ. ಅತ್ಯಾಚಾರ ಆರೋಪ ಪ್ರಕರಣದ ತನಿಖೆಯಿಂದ ತಪ್ಪಿಸಿಕೊಳ್ಳಲು ಹೊಸ ಕಥೆಗಳನ್ನು ಅವರು ಕಟ್ಟುತ್ತಿದ್ದಾರೆ’ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.