ADVERTISEMENT

ಸಿ.ಡಿ. ಪ್ರಕರಣ: ಆಪ್ತನ ಮೂಲಕ ದೂರು ನೀಡಿದ ರಮೇಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2021, 12:03 IST
Last Updated 13 ಮಾರ್ಚ್ 2021, 12:03 IST
ಮಾಜಿ ಸಚಿವ ರಮೇಶ ಜಾರಕಿಹೊಳಿ
ಮಾಜಿ ಸಚಿವ ರಮೇಶ ಜಾರಕಿಹೊಳಿ   

ಬೆಂಗಳೂರು: ಸಿ.ಡಿ. ಪ್ರಕರಣದ ವಿಚಾರಣೆಯನ್ನು ಎಸ್ಐಟಿ ನಡೆಸುತ್ತಿರುವ ಬೆನ್ನಲ್ಲೇ ರಮೇಶ ಜಾರಕಿಹೊಳಿ ಅವರು ಆಪ್ತನ ಮೂಲಕ ಸದಾಶಿವನಗರ ಠಾಣೆಗೆ ದೂರು ನೀಡಿದ್ದಾರೆ ಎಂದು ಗೊತ್ತಾಗಿದೆ.

ನೆಲಮಂಗಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ನಾಗರಾಜ್ ಅವರ ಮೂಲಕ ದೂರಿನ ಪ್ರತಿಯನ್ನು ಸದಾಶಿವನಗರ ಠಾಣೆ ಇನ್‌ಸ್ಪೆಕ್ಟರ್ ಅವರಿಗೆ ನೀಡಲಾಗಿದೆ.

ಮಧ್ಯಾಹ್ನ ಠಾಣೆಗೆ ಬಂದಿದ್ದ ನಾಗರಾಜ್, ಎರಡು ಪುಟಗಳ ದೂರು ನೀಡಿ ಹೋದರು.

ADVERTISEMENT

'ನಕಲಿ ಸಿ.ಡಿ ಸೃಷ್ಟಿಸಿ ಬ್ಲ್ಯಾಕ್‌ಮೇಲ್ ಮಾಡಿ ತೇಜೋವಧೆಗೆ ಯತ್ನಿಸಿದ್ದಾರೆ' ಎಂಬುದಾಗಿ ದೂರಿನಲ್ಲಿ ಆರೋಪಿಸಿರುವ ಮಾಹಿತಿ ಸಿಕ್ಕಿದೆ. ದೂರಿನ ಬಗ್ಗೆ ಇನ್‌ಸ್ಪೆಕ್ಟರ್, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ದೂರಿನ ಪರಿಶೀಲನೆ ನಡೆಯುತ್ತಿದ್ದು, ಸದ್ಯಕ್ಕೆ ಎಫ್ಐಆರ್ ದಾಖಲಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.