ಬೆಂಗಳೂರು: ತರಬೇತಿ ಅವಧಿಯಲ್ಲಿ ಉತ್ತಮ ಸಾಧನೆ ಮಾಡಿರುವ ರಾಜ್ಯದ 10 ಪೊಲೀಸರಿಗೆ ಕೇಂದ್ರ ಗೃಹ ಸಚಿವಾಲಯದ 2020–21ನೇ ಸಾಲಿನ ಪದಕ ಲಭಿಸಿದೆ.
‘ಪೊಲೀಸರ ಸಾಧನೆ ಪರಿಗಣಿಸಿ ಪದಕಕ್ಕೆ ಆಯ್ಕೆ ಮಾಡಲಾಗಿದೆ' ಎಂದು ಕೇಂದ್ರಗೃಹಸಚಿವಾಲಯ ಶುಕ್ರವಾರ ಆದೇಶ ಹೊರಡಿಸಿದೆ.
ಪದಕಪಡೆದವರು: ರುದ್ರಯ್ಯ ಮಹಾಂತಯ್ಯ ಗಂಜಿಗಟ್ಟಿ (ಕಾನೂನು ಅಧಿಕಾರಿ), ಶ್ರೀಕಾಂತ್ ನಾಯ್ಕ್ (ಸ್ಪೆಷಲ್ ರಿಸರ್ವ್ ಪೊಲೀಸ್ ಇನ್‌ಸ್ಪೆಕ್ಟರ್), ಶ್ರೀಶೈಲ ಪಿ.ಚೌಗುಲಾ (ಸ್ಪೆಷಲ್ ರಿಸರ್ವ್ ಪೊಲೀಸ್ ಇನ್‌ಸ್ಪೆಕ್ಟರ್), ವನಮಾಲಾ ಶರೀಫ್ ಶಿವಯೋಗಿ ದಾನಣ್ಣವರ್ (ಪೊಲೀಸ್ ಸಬ್ ಇನ್‌ಸ್ಪೆಕ್ಟರ್), ಸಪ್ನಾ ಶಿವಾನಂದಹಾವನೂರ (ಪೊಲೀಸ್ ಸಬ್ ಇನ್‌ಸ್ಪೆಕ್ಟರ್), ಕಾಶಿರಾಯ ಫಕೀರಪ್ಪ ಗೊಂಗಡೆ (ಸಶಸ್ತ್ರ ಪಡೆಯ ಹೆಡ್ ಕಾನ್‌ಸ್ಟೆಬಲ್), ಜ್ಞಾನದೇವ ನಾವಳ (ಸ್ಪೆಷಲ್ ರಿಸರ್ವ್ ಹೆಡ್ ಕಾನ್‌ಸ್ಟೆಬಲ್), ತಮ್ಮಣ್ಣ ರಾಮಪ್ಪ ಗೊರಬಾಳ (ಸ್ಪೆಷಲ್ ರಿಸರ್ವ್ ಹೆಡ್ ಕಾನ್‌ಸ್ಟೆಬಲ್), ಎಂ.ಸುಬ್ರಹ್ಮಣ್ಯ ಶರ್ಮಾ (ಮೊದಲ ದರ್ಜೆ ಸಹಾಯಕ), ಟಿ.ಪಿ.ಶ್ವೇತಾ (ಮೊದಲ ದರ್ಜೆ ಸಹಾಯಕಿ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.