ADVERTISEMENT

ಸರ್ವರ್ ಸಮಸ್ಯೆ | ಸಿಇಟಿ: ಆಯ್ಕೆ ದಾಖಲು ಅವಧಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 18:23 IST
Last Updated 11 ಜುಲೈ 2025, 18:23 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಎಂಜನಿಯರಿಂಗ್‌ ಸೇರಿದಂತೆ ವೃತ್ತಿಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಸೀಟು ಹಂಚಿಕೆ ಪ್ರಕ್ರಿಯೆ ಆರಂಭವಾಗಿದ್ದು, ಸರ್ವರ್‌ ಸಮಸ್ಯೆಯ ಕಾರಣ ಆಯ್ಕೆಗಳನ್ನು (ಆಪ್ಷನ್‌) ದಾಖಲಿಸಲು ನೀಡಿದ್ದ ಅವಧಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಜುಲೈ 18ರವರೆಗೆ ವಿಸ್ತರಿಸಿದೆ.

ಎಂಜಿನಿಯರಿಂಗ್, ಪಶು ವೈದ್ಯಕೀಯ ಮತ್ತು ಪಶುಸಂಗೋಪನೆ, ಕೃಷಿ ವಿಜ್ಞಾನ, ಅಲೈಡ್‌ ಹೆಲ್ತ್‌ಸೈನ್ಸ್ ಕೋರ್ಸುಗಳಿಗೆ ಆಯ್ಕೆಗಳನ್ನು ದಾಖಲಿಸಲು ಜುಲೈ 15ರವರೆಗೆ ಅವಕಾಶ ನೀಡಲಾಗಿತ್ತು. ಕೆಲ ಪ್ರದೇಶಗಳಲ್ಲಿ ಸರ್ವರ್‌ ಸಮಸ್ಯೆ ಕಾಣಿಸಿಕೊಂಡ ಕಾರಣ ಅವಧಿ ವಿಸ್ತರಿಸಲಾಗಿದೆ. ಅಭ್ಯರ್ಥಿಗಳು ಆತಂಕಕ್ಕೆ ಒಳಗಾಗದೆ ಪ್ರಕ್ರಿಯೆ ಪೂರೈಸಬೇಕು. ಜುಲೈ 21ರಂದು ಅಣಕು ಸೀಟು ಹಂಚಿಕೆ ಫಲಿತಾಂಶ, ಜುಲೈ 28ರಂದು ಅಂತಿಮ ಫಲಿತಾಂಶ ಪ್ರಕಟಿಸಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಹೇಳಿದ್ದಾರೆ.

ADVERTISEMENT

ಅಭ್ಯರ್ಥಿಗಳು ಕಾಲೇಜುಗಳು ಮತ್ತು ಕೋರ್ಸುಗಳ ಪಟ್ಟಿಯನ್ನು ಆದ್ಯತೆಯ ಕ್ರಮದಲ್ಲಿ (ಕಾಲೇಜು ಕೋಡ್ ಮತ್ತು ಕೋರ್ಸ್‌ ಕೋಡ್‌) ಬಿಳಿ ಕಾಗದದಲ್ಲಿ ಮುಂಚಿತವಾಗಿಯೇ ಬರೆದು ಸಿದ್ದಪಡಿಸಿಕೊಂಡು ನಂತರ ಪೋರ್ಟಲ್‌ನಲ್ಲಿ ಆಪ್ಷನ್‌ ನಮೂದಿಸಬೇಕು. ಇದರಿಂದ ಸಮಯ ಉಳಿತಾಯವಾಗುತ್ತದೆ. ಸರ್ವರ್‌ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಎಂದು ಸಲಹೆ ನೀಡಿದ್ದಾರೆ.

ವೈದ್ಯಕೀಯ ಕೋರ್ಸ್‌ಗೆ 17ರಿಂದ ದಾಖಲೆ ಪರಿಶೀಲನೆ:

ನೀಟ್‌-2025ಕ್ಕೆ ನೋಂದಣಿ ಮತ್ತು ಆನ್‌ಲೈನ್‌ ಅರ್ಜಿ ಭರ್ತಿ ಮಾಡಿ, ಶುಲ್ಕ ಪಾವತಿಸಿರುವ ಅಭ್ಯರ್ಥಿಗಳು ಅಗತ್ಯ ಮೂಲ ದಾಖಲೆಗಳ ಪರಿಶೀಲನೆಗೆ ಕೆಇಎ ಕಚೇರಿಗೆ ಜುಲೈ 17ರಿಂದ 19ರ ಒಳಗೆ ಹಾಜರಾಗಬೇಕು ಎಂದು ಸೂಚಿಸಲಾಗಿದೆ.

ಕನ್ನಡ ಭಾಷಾ ಪರೀಕ್ಷೆ: ಹೊಸದಾಗಿ ನೋಂದಣಿ ಮಾಡಿರುವ ಹೊರನಾಡು ಮತ್ತು ಗಡಿನಾಡು ಕನ್ನಡ ಅಭ್ಯರ್ಥಿಗಳಿಗೆ ಜುಲೈ 17ರಂದು ಮಧ್ಯಾಹ್ನ 3.30 ರಿಂದ ಸಂಜೆ 4.30ರವರೆಗೆ ಬೆಂಗಳೂರು ಕೇಂದ್ರದಲ್ಲಿ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.