ADVERTISEMENT

ಸಿಇಟಿ: ಬೆಂಗಳೂರಿಗೆ ಕೀರ್ತಿಯ ಗರಿ

​ಪ್ರಜಾವಾಣಿ ವಾರ್ತೆ
Published 25 ಮೇ 2019, 20:16 IST
Last Updated 25 ಮೇ 2019, 20:16 IST
ಜಫಿನ್‌ ಬಿಜು
ಜಫಿನ್‌ ಬಿಜು   

ಬೆಂಗಳೂರು: ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ಬಹುಪಾಲು ರ‍್ಯಾಂಕ್‌ಗಳನ್ನು ಬಾಚಿಕೊಂಡಿರುವ ಬೆಂಗಳೂರಿನ ವಿದ್ಯಾರ್ಥಿಗಳು ಕೀರ್ತಿಯ
ಗರಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ವೃತ್ತಿ ಶಿಕ್ಷಣ ಕೋರ್ಸ್‌ಗಳ ಐದು ವಿಭಾಗಗಳಲ್ಲಿನ ಮೊದಲ ಹತ್ತು ರ‍್ಯಾಂಕ್‌ಗಳಲ್ಲಿ ಬಹುಪಾಲನ್ನು ಬೆಂಗಳೂರು, ಮಂಗಳೂರು, ಮೈಸೂರು ಜಿಲ್ಲೆಯ ವಿದ್ಯಾರ್ಥಿಗಳು ಗಳಿಸಿದ್ದಾರೆ.

ಎಂಜಿನಿಯರಿಂಗ್ ವಿಭಾಗದ ಮೊದಲ ಹತ್ತು ರ‍್ಯಾಂಕ್‌ಗಳಲ್ಲಿ 7 ಸ್ಥಾನಗಳನ್ನು ಬೆಂಗಳೂರಿನ ವಿದ್ಯಾರ್ಥಿಗಳು, 2 ಸ್ಥಾನಗಳನ್ನು ಮಂಗಳೂರಿನ ವಿದ್ಯಾರ್ಥಿಗಳು ಮತ್ತು ಒಂದು ಸ್ಥಾನವನ್ನು ಬಳ್ಳಾರಿಯ ವಿದ್ಯಾರ್ಥಿ ಪಡೆದಿದ್ದಾರೆ.

ADVERTISEMENT

ಬಿ.ಎಸ್ಸಿ.(ಕೃಷಿ ವಿಜ್ಞಾನ) ವಿಭಾಗದಲ್ಲಿ ಬೆಂಗಳೂರಿನ 3, ಮಂಗಳೂರಿನ 4, ಮೈಸೂರು, ಹಾಸನ ಮತ್ತು ಶಿವಮೊ
ಗ್ಗದ ತಲಾ ಒಬ್ಬ ವಿದ್ಯಾರ್ಥಿ ಮೊದಲ ಹತ್ತು ರ‍್ಯಾಂಕ್‌ಗಳಲ್ಲಿ ಸ್ಥಾನ ಗಳಿಸಿದ್ದಾರೆ.

ಎಂಜಿನಿಯರಿಂಗ್‌ ಕೋರ್ಸ್‌ ವಿಭಾಗದಲ್ಲಿ 1,40,957 ಅಭ್ಯರ್ಥಿಗಳಿಗೆ, ಬಿ.ಎಸ್ಸಿ.ಯಲ್ಲಿ(ಕೃಷಿ ವಿಜ್ಞಾನ) 1,13,294 ಅಭ್ಯರ್ಥಿಗಳಿಗೆ, ಬಿ.ವಿ.ಎಸ್ಸಿ.ಯಲ್ಲಿ(ಪಶು ವೈದ್ಯಕೀಯ) 1,18,045 ಅಭ್ಯರ್ಥಿಗಳಿಗೆ ರ‍್ಯಾಂಕ್‌ ಹಂಚಿಕೆ ಮಾಡಲಾಗಿದೆ. ಫಾರ್ಮಸಿ ಕೋರ್ಸ್‌ಗಳಿಗೂ 1.40 ಲಕ್ಷಕ್ಕಿಂತಲೂ ಹೆಚ್ಚು ಅಭ್ಯರ್ಥಿಗಳಿಗೆ ರ‍್ಯಾಂಕಿಂಗ್‌ ನೀಡಲಾಗಿದೆ.

***

ಕೋಚಿಂಗ್‌ಗೆ ಹೋಗಿದ್ದರಿಂದ ಪರೀಕ್ಷೆ ಎದುರಿಸಲು ಅನುಕೂಲವಾಯಿತು. ಮೂಲ ವಿಜ್ಞಾನ ಮತ್ತು ಕೃಷಿ ವಿಜ್ಞಾನದಲ್ಲಿ ಆಸಕ್ತಿಯಿದೆ. ಯೋಚಿಸಿ ಮುಂದಿನ ಕೋರ್ಸ್‌ ಆಯ್ದುಕೊಳ್ಳುತ್ತೇನೆ.

– ಕೀರ್ತನಾ ಎಂ ಅರುಣ್‌,ನ್ಯಾಷನಲ್‌ ಪಬ್ಲಿಕ್‌ ಶಾಲೆ, ಬೆಂಗಳೂರು

ಬಿ.ಎಸ್ಸಿ.(ಕೃಷಿ ವಿಜ್ಞಾನ)

**

ಜೆಇಇ ಅಡ್ವಾನ್ಸ್‌ ಪರೀಕ್ಷೆಗೆ ಓದುತ್ತಿದ್ದೇನೆ. ಈ ಮಧ್ಯೆ ಸಿಇಟಿ ಬರೆದೆ. ಮುಂದೆ ಉತ್ತಮ ಎಂಜಿನಿಯರ್‌ ಆಗುವ ಗುರಿಯಿದೆ.

ಸಾಯಿ ಸಾಕೇತಿಕಾ ಚೆಕುರಿ, ಚೈತನ್ಯ ಟೆಕ್ನೊ ಕಾಲೇಜು, ಬೆಂಗಳೂರು

(ಫಾರ್ಮಸಿ)

ಅಂಕಿ–ಅಂಶ

* 431 - ಪರೀಕ್ಷಾ ಕೇಂದ್ರಗಳು

* 1,94,308 - ಅಭ್ಯರ್ಥಿಗಳು ನೋಂದಣಿ

* 1,80,315 - ಅಭ್ಯರ್ಥಿಗಳು ಪರೀಕ್ಷೆಗೆ ಹಾಜರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.