ADVERTISEMENT

ಸಿಇಟಿ: ಆಯ್ಕೆ ದಾಖಲು ಅವಧಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 16:07 IST
Last Updated 18 ಜುಲೈ 2025, 16:07 IST
   

ಬೆಂಗಳೂರು: ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಕಾಲೇಜು, ಕೋರ್ಸ್‌ಗಳ ಆಯ್ಕೆಗಳನ್ನು ದಾಖಲಿಸುವ ಅವಧಿಯನ್ನು ಜುಲೈ 22ರವರೆಗೆ ವಿಸ್ತರಿಸಲಾಗಿದೆ. 

ಎಂಜಿನಿಯರಿಂಗ್, ದಂತ ವೈದ್ಯಕೀಯ, ಪಶು ವೈದ್ಯಕೀಯ, ಕೃಷಿ ವಿಜ್ಞಾನ, ಬಿ.ಎಸ್‌ಸಿ ನರ್ಸಿಂಗ್ ಸೇರಿದಂತೆ ಹಲವು ಕೋರ್ಸ್‌ಗಳ ಸೀಟು ಲಭ್ಯತಾ ಪಟ್ಟಿ ಸಿದ್ಧವಾಗಿದ್ದು, ಲಭ್ಯವಿರುವ ಎಲ್ಲ ಕೋರ್ಸ್‌ಗಳಿಗೂ ಆಯ್ಕೆಗಳನ್ನು ದಾಖಲಿಸಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಹೇಳಿದ್ದಾರೆ.

ವೈದ್ಯಕೀಯ, ಆಯುರ್ವೇದ, ಹೋಮಿಯೋಪತಿ ಮತ್ತು ಯುನಾನಿ, ಫಾರ್ಮಸಿ ಕೋರ್ಸ್‌ಗಳ ಸೀಟು ಲಭ್ಯತಾ ಪಟ್ಟಿ ಬಂದ ನಂತರ ಆಯ್ಕೆ ನಮೂದಿಸಲು ಅವಕಾಶ ನೀಡಲಾಗುವುದು. ಕೊನೆ ದಿನಾಂಕದವರೆಗೆ ಎಷ್ಟು ಬಾರಿಯಾದರೂ ಬದಲಿಸಿಕೊಳ್ಳಬಹುದು. ಆದರೆ, ಅಂತಿಮವಾಗಿ ಬದಲಿಸಿದ ವಿವರಗಳನ್ನು ಮಾತ್ರ ಸೀಟು ಹಂಚಿಕೆಗೆ ಪರಿಗಣಿಸಲಾಗುತ್ತದೆ ಎಂದು ವಿವರಿಸಿದ್ದಾರೆ.

ADVERTISEMENT

ಡಿಸಿಇಟಿ ಸೀಟು ಹಂಚಿಕೆ ಪ್ರಕಟ:

ಎಂಜಿನಿಯರಿಂಗ್‌ ಎರಡನೇ ವರ್ಷಕ್ಕೆ ನೇರ ಪ್ರವೇಶ ಕಲ್ಪಿಸುವ ಡಿಪ್ಲೊಮಾ ಸಿಇಟಿ ಮೊದಲ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಪ್ರಕಟಿಸಲಾಗಿದೆ. 

ಸೀಟು ಹಂಚಿಕೆಯಾದವರು ಜುಲೈ 19ರಂದು‌ ಮಧ್ಯಾಹ್ನ 3ರ ಒಳಗೆ ತಮಗೆ ಸೂಕ್ತ ಎನಿಸಿದ ಕಾಲೇಜು, ಕೋರ್ಸ್‌ಗಳನ್ನು ದಾಖಲಿಸಬೇಕು. ಯಾವುದೇ ಆಯ್ಕೆ ದಾಖಲಿಸದೇ ಸುಮ್ಮನಿದ್ದರೂ ನಂತರದ ಸುತ್ತುಗಳಿಗೆ ಅವರನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರಾಧಿಕಾರ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.