ADVERTISEMENT

ಸಿಇಟಿ: ಚೈತನ್ಯ ಸಂಸ್ಥೆಗೆ 46 ರ‍್ಯಾಂಕ್‌

​ಪ್ರಜಾವಾಣಿ ವಾರ್ತೆ
Published 25 ಮೇ 2019, 19:27 IST
Last Updated 25 ಮೇ 2019, 19:27 IST

ಬೆಂಗಳೂರು: ವೃತ್ತಿ ಶಿಕ್ಷಣ ಕೋರ್ಸ್‌ಗಳ ದಾಖಲಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ಚೈತನ್ಯ ವಿದ್ಯಾಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು 100ರ ಒಳಗಿನ46 ರ‍್ಯಾಂಕ್‌ಗಳನ್ನು ಗಳಿಸಿದ್ದಾರೆ.

ಸಿಇಟಿ ಫಲಿತಾಂಶ ಹೊರಬೀಳುತ್ತಿದ್ದಂತೆ ಚೈತನ್ಯ ಶಿಕ್ಷಣ ಸಂಸ್ಥೆಯಲ್ಲಿ ಹರ್ಷ ಮನೆಮಾಡಿತ್ತು. ವಿದ್ಯಾರ್ಥಿಗಳು, ಬೋಧಕರು, ಬೋಧಕೇತರ ಸಿಬ್ಬಂದಿ ಪರಿಸ್ಪರ ಶುಭಕೋರಿ ಸಂತಸಪಟ್ಟರು.

ವಿವಿಧ ವಿಭಾಗಗಳಲ್ಲಿನ 10ರ ಒಳಗಿನ 11 ರ್‍ಯಾಂಕ್‌ಗಳಿಗೆ ಇದೇ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಭಾಜನರಾಗಿದ್ದಾರೆ.ಸಂಸ್ಥೆಯಲ್ಲಿ ಅಧ್ಯಯನ ಮಾಡಿದ ಜಫಿನ್‌ ಬಿಜು ಅವರು ಎಂಜಿನಿಯರಿಂಗ್‌ ವಿಭಾಗದಲ್ಲಿ ಪ್ರಥಮ ರ್‍ಯಾಂಕ್‌, ಪಿ.ಮಹೇಶ್‌ ಆನಂದ್‌ ಅವರು ನ್ಯಾಚುರೋಪಥಿ ಮತ್ತು ಯೋಗ ವಿಜ್ಞಾನ, ಬಿ.ಎಸ್ಸಿ. ಪಶು ವೈದ್ಯಕೀಯ ವಿಭಾಗದಲ್ಲಿ ಪ್ರಥಮ ರ್‍ಯಾಂಕ್‌, ಸಾಹಿ ಸಾಕೇತಿಕಾ ಚೆಕುರಿ ಅವರು ಬಿ–ಫಾರ್ಮ್‌ನಲ್ಲಿ ಪ್ರಥಮ ರ್‍ಯಾಂಕ್‌ ಮತ್ತು ಎಂಜಿನಿಯರಿಂಗ್‌ನಲ್ಲಿ ತೃತೀಯ ರ್‍ಯಾಂಕ್‌ ಗಳಿಸಿದ್ದಾರೆ.

ADVERTISEMENT

ಚೈತನ್ಯ ಶಿಕ್ಷಣ ಸಂಸ್ಥೆಗಳ ನಿರ್ದೇಶಕಿ ಸುಷ್ಮಾ ಬೋಪಣ್ಣ, ‘ವಿದ್ಯಾರ್ಥಿಗಳು, ಬೋಧಕರು ಮತ್ತು ಪೋಷಕರ ಸಾಮೂಹಿಕ ಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ. ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ’ ಎಂದು ಶುಭ ಹಾರೈಸಿದರು.

ನಾರಾಯಣ ಕಾಲೇಜಿನ 12ಮಂದಿಗೆ ರ‍್ಯಾಂಕ್‌

ಈ ಸಾಲಿನಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ನಾರಾಯಣ ಸಿಬಿಎಸ್‌ಸಿ ಹಾಗೂ ಪಿಯು ಕಾಲೇಜಿನ ವಿದ್ಯಾರ್ಥಿಗಳು ವೈದ್ಯಕೀಯ ಹಾಗೂ ಎಂಜಿನಿಯರಿಂಗ್‌ ವಿಭಾಗಗಳಲ್ಲಿ ಹತ್ತರ ಒಳಗಿನ12 ರ್‍ಯಾಂಕ್‌ ಗಳಿಸಿದ್ದಾರೆ.

ಕಾಲೇಜಿನ 64 ವಿದ್ಯಾರ್ಥಿಗಳು ರ್‍ಯಾಂಕ್‌ ಒಳಗಿನ ರ‍್ಯಾಂಕ್‌ ಪಡೆದಿದ್ದಾರೆ.

ಉದಿತ್‌ ಮೋಹನ್‌ ಪಶು ವಿಜ್ಞಾನದಲ್ಲಿ 2ನೇರ್‍ಯಾಂಕ್‌, ಐಎಸ್‌ಎಂಎಚ್‌–3ನೇ ರ್‍ಯಾಂಕ್‌, ಬಿ–ಫಾರ್ಮ ಹಾಗೂ ಡಿ–ಫಾರ್ಮಗಳಲ್ಲಿ 6ನೇರ್‍ಯಾಂಕ್‌, ಎಸ್‌.ಲಿಖಿತಾ ಪಶುವಿಜ್ಞಾನದಲ್ಲಿ 2ನೇರ್‍ಯಾಂಕ್‌, ಮಧುಲಿಕಾ ಎಸ್‌.ಜಯದೇವ್‌ಪಶುವಿಜ್ಞಾನದಲ್ಲಿ 6ನೇರ್‍ಯಾಂಕ್‌ ಹಾಗೂಐಎಸ್‌ಎಂಎಚ್‌ನಲ್ಲಿ 8ನೇರ್‍ಯಾಂಕ್‌ ಪಡೆದಿದ್ದಾರೆ.

ಸಿ.ಎಸ್‌.ಸಾಯಿ ವಿಷ್ಣು ಎಂಜಿನಿಯರಿಂಗ್‌ನಲ್ಲಿ 7ನೇರ್‍ಯಾಂಕ್‌, ಬಿ–ಫಾರ್ಮ ಹಾಗೂ ಡಿ–ಫಾರ್ಮಗಳಲ್ಲಿ 10ತನೇರ್‍ಯಾಂಕ್‌ ಗಳಿಸಿದ್ದಾರೆ. ನೀರಜ್‌ ಕೆ. ಉಡುಪ ಎಂಜಿನಿಯರಿಂಗ್‌ನಲ್ಲಿ 8ನೇರ್‍ಯಾಂಕ್‌, ಅನಿರುದ್ಧ್‌ ಫುಕ್ಕನ್‌ ಎಂಜಿನಿಯರಿಂಗ್‌ನಲ್ಲಿ 10ನೇರ್‍ಯಾಂಕ್‌ ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆ ಬಗ್ಗೆ ಹರ್ಷ ವ್ಯಕ್ತಪಡಿಸಿದ ನಾರಾಯಣ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪಿ.ಸಿಂಧೂರ, ‘ಆಧುನಿಕ ಶಿಕ್ಷಣ ವ್ಯವಸ್ಥೆ ಮೂಲಕ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಬಗ್ಗೆಯೂ ಗಮನ ನೀಡಲಾಗಿತ್ತು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.