ADVERTISEMENT

ಕಾಂಗ್ರೆಸ್‌ ಯಾವಾಗಲೂ ಪಾಕಿಸ್ತಾನ ಪರ: ಛಲವಾದಿ ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 17 ಮೇ 2025, 23:49 IST
Last Updated 17 ಮೇ 2025, 23:49 IST
<div class="paragraphs"><p>ಛಲವಾದಿ ನಾರಾಯಣಸ್ವಾಮಿ</p></div>

ಛಲವಾದಿ ನಾರಾಯಣಸ್ವಾಮಿ

   

ಹಾಸನ: ‘ಕಾಂಗ್ರೆಸ್ ಯಾವತ್ತೂ ಪಾಕಿಸ್ತಾನದ ಪರವಾಗಿಯೇ ಇದೆ. ಏಕೆಂದರೆ ಅದು ಅವರ ಸಂತತಿ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.

ಶಾಸಕ ಕೊತ್ತೂರು ಮಂಜುನಾಥ್ ಹೇಳಿಕೆಗೆ ಶನಿವಾರ ನಗರದಲ್ಲಿ ಪ್ರತಿಕ್ರಿಯಿಸಿ, ‘ಅವರೊಬ್ಬರೇ ಅಲ್ಲ. ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಕೃಷ್ಣ ಬೈರೇಗೌಡ, ಸಂತೋಷ್ ಲಾಡ್ ಕೂಡ ಮಾತನಾಡಿದ್ದಾರೆ. ಕಾಂಗ್ರೆಸ್‌ನವರ ಜನ್ಮವೇ ಅಂಥದ್ದು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ನಾವು ಸತ್ತಂಗೆ ಮಾಡುತ್ತೇವೆ. ಎರಡನೇ ಹಂತದ ನಾಯಕರು ಅತ್ತಂಗೆ ಮಾಡಿ ಎಂದು ಕಾಂಗ್ರೆಸ್‌ನ ದೊಡ್ಡ ನಾಯಕರು ಹೇಳುತ್ತಾರೆ. ಇದೇ ಅವರ ದ್ವಂದ್ವ ನೀತಿ. 26 ಜನರನ್ನು ಧರ್ಮ ಕೇಳಿ ಹೊಡೆದರಲ್ಲಾ, ಅವರು ನಮ್ಮ ದೇಶದವರಾ? ಅವರು ಉಗ್ರವಾದಿಗಳು. ಇಂತಹ ಉಗ್ರವಾದಿಗಳು ಯಾರೇ ಇದ್ದರೂ ಹುಡುಕಿ ಹೊಡೆಯುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಅದರಂತೆ ಆಪರೇಷನ್‌ ಸಿಂಧೂರ ಮೂಲಕ ಉಗ್ರರನ್ನು ಹೊಡೆದುರುಳಿಸಲಾಗಿದೆ’ ಎಂದು ಹೇಳಿದರು.

‘ಆಪರೇಷನ್‌ ಸಿಂಧೂರಗೆ ವಿರೋಧ ಮಾಡುವುದಾದರೆ ಕಾಂಗ್ರೆಸ್ ಸಿಂಧೂರಕ್ಕೆ ಸಂಚಕಾರ ಬರಬಹುದು. ಎಚ್ಚರಿಕೆಯಿಂದ ಇರಿ. ಇಂಥ ಅಪಸ್ವರ ತೆಗೆಯುವುದನ್ನು ಬಿಡಿ. ಪಾಕಿಸ್ತಾನ ಕೇಳುವ ಪ್ರಶ್ನೆಯನ್ನೇ ಕಾಂಗ್ರೆಸ್ ಕೇಳುತ್ತಿದೆ. ಕಾಂಗ್ರೆಸ್, ಪಾಕಿಸ್ತಾನದ ಬಿ ಟೀಂ’ ಎಂದು ಲೇವಡಿ ಮಾಡಿದರು.

‘ಪಾಪ ಮಹಾತ್ಮ ಗಾಂಧೀಜಿ ಅವರಿಗೆ ಗೊತ್ತಿರಲಿಲ್ಲ. ಎಲ್ಲ ಭಯೋತ್ಪಾದಕರನ್ನು ಪಾಕಿಸ್ತಾನಕ್ಕೆ ಕಳುಹಿಸಿ
ದರು. ಪಾಕಿಸ್ತಾನದ ಅನುಯಾಯಿಗಳನ್ನು ಇಲ್ಲಿಯೇ ಬಿಟ್ಟಿದ್ದಾರೆ. ಅವರನ್ನೂ ಆಗಲೇ ಕಳುಹಿಸಿದ್ದರೆ, ಈ ಪರಿಸ್ಥಿತಿ ಬರುತ್ತಿರಲಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.