ADVERTISEMENT

ಚಾಮುಂಡೇಶ್ವರಿ ದೇಗುಲದ ಆದಾಯ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 18:06 IST
Last Updated 3 ಏಪ್ರಿಲ್ 2019, 18:06 IST

ಮೈಸೂರು: ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲಕ್ಕೆ ವಿವಿಧ ಮೂಲಗಳಿಂದ ಬರುವ ಒಟ್ಟು ಆದಾಯ ಕಳೆದ ಬಾರಿಗಿಂತ ₹ 3.35 ಕೋಟಿಯಷ್ಟು ಹೆಚ್ಚಿದೆ.

2018–19ರ ಸಾಲಿನಲ್ಲಿ ದೇಗುಲಕ್ಕೆ ₹ 33.30 ಕೋಟಿ ಆದಾಯ ಬಂದಿದೆ. 2017–18 ರಲ್ಲಿ ₹ 29.95 ಕೋಟಿ ಆದಾಯ ಬಂದಿತ್ತು ಎಂದು ದೇಗುಲದ ಪ್ರಕಟಣೆ ತಿಳಿಸಿದೆ.

ಹುಂಡಿಯಿಂದ ₹ 11.57 ಕೋಟಿ ಹಣ ಸಂಗ್ರಹವಾಗಿದೆ. ನೇರ ಹಾಗೂ ವಿಶೇಷ ಪ್ರವೇಶ ಶುಲ್ಕದಿಂದ ₹ 10.52 ಕೋಟಿ ಹಾಗೂ ಲಾಡು ಪ್ರಸಾದ ಮಾರಾಟದಿಂದ ₹ 3.83 ಕೋಟಿ ಆದಾಯ ಸಂಗ್ರಹವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.