ADVERTISEMENT

ಕ್ರಿಸ್‌ಮಸ್‌: ಎಲ್ಲೆಡೆ ಚರ್ಚ್‌ಗಳಲ್ಲಿ ಸಡಗರ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2018, 20:02 IST
Last Updated 24 ಡಿಸೆಂಬರ್ 2018, 20:02 IST
ಕ್ರಿಸ್‌ಮಸ್‌ ಅಂಗವಾಗಿ ವಿದ್ಯುದ್ದೀಪಗಳ ಅಲಂಕಾರದಿಂದ ಕಂಗೊಳಿಸಿದ ಶಿವಾಜಿನಗರದ ಸೇಂಟ್‌ ಬೆಸಿಲಿಕಾ ಚರ್ಚ್‌ –ಪ್ರಜಾವಾಣಿ ಚಿತ್ರ/ರಂಜು.ಪಿ
ಕ್ರಿಸ್‌ಮಸ್‌ ಅಂಗವಾಗಿ ವಿದ್ಯುದ್ದೀಪಗಳ ಅಲಂಕಾರದಿಂದ ಕಂಗೊಳಿಸಿದ ಶಿವಾಜಿನಗರದ ಸೇಂಟ್‌ ಬೆಸಿಲಿಕಾ ಚರ್ಚ್‌ –ಪ್ರಜಾವಾಣಿ ಚಿತ್ರ/ರಂಜು.ಪಿ   

ಬೆಂಗಳೂರು: ಕ್ರೈಸ್ತರ ಪವಿತ್ರ ಹಬ್ಬ ಕ್ರಿಸ್‌ಮಸ್ ಮುನ್ನಾ ದಿನವಾದ ಸೋಮವಾರ ನಗರದ ಸೇರಿದಂತೆ ರಾಜ್ಯ, ರಾಷ್ಟ್ರ ಹಾಗೂ ವಿಶ್ವದ ವಿವಿಧೆಡೆ ಚರ್ಚ್‌ಗಳಲ್ಲಿ ಸಂಭ್ರಮ ಮನೆ ಮಾಡಿತ್ತು.

ಚರ್ಚ್‌ಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ಏಸುವಿನ ಜನ್ಮವೃತ್ತಾಂತ ಸಾರುವ ಗೋದಲಿಗಳನ್ನು ನಿರ್ಮಿಸಲಾಗಿತ್ತು. ಕ್ರೈಸ್ತ ಸಮುದಾಯದವರು ಚರ್ಚ್‌ಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಸಿಹಿ ಹಂಚಿದರು. ಹೊಸ ಬಟ್ಟೆ ತೊಟ್ಟು ಸಂಭ್ರಮಪಟ್ಟರು.

ಶಿವಾಜಿನಗರದ ಸೇಂಟ್‌ ಮೇರಿ ಬೆಸಿಲಿಕಾ, ಫ್ರೇಜರ್‌ಟೌನ್‌ನ ಸೇಂಟ್‌ ಜಾನ್ಸ್‌ ಚರ್ಚ್‌, ಹಡ್ಸನ್‌ ವೃತ್ತದ ಹಡ್ಸನ್‌ ಚರ್ಚ್‌, ಎಂ.ಜಿ. ರಸ್ತೆಯ ಸೇಂಟ್‌ ಮಾರ್ಕ್ಸ್‌ ಚರ್ಚ್‌ ಸೇರಿದಂತೆ ವಿವಿಧ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆಗಳು ನಡೆದವು.

ADVERTISEMENT
ಶಿವಾಜಿನಗರದಲ್ಲಿರುವ ಸಂತ ಬೇಸಿಲಿಕಾ ಚರ್ಚನಲ್ಲಿ ಕ್ರಿಸ್‌ಮಸ್‌ ಅಂಗವಾಗಿ ಭಕ್ತರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು –ಪ್ರಜಾವಾಣಿ ಚಿತ್ರ/ ರಂಜು ಪಿ

ಹಬ್ಬದ ಅಂಗವಾಗಿ ಚರ್ಚ್‌ಗಳಲ್ಲಿ ತ್ರಿಕೋನ ಆಕಾರದ ‘ಕ್ರಿಸ್‌ಮಸ್ ಟ್ರೀ’ಗಳನ್ನು ರಚಿಸಿ ಅವುಗಳಿಗೆ ಉಡುಗೊರೆಗಳನ್ನು ಕಟ್ಟಲಾಗಿತ್ತು. ಅವು ವಿದ್ಯು­ತ್‌ ದೀಪ ಹಾಗೂ ಆಲಂಕಾರಿಕ ವಸ್ತು­ಗಳಿಂದ ಕಂಗೊಳಿಸಿದವು.

ನಗರದ ಹಳೆಯ ಚರ್ಚ್‌ಗಳಲ್ಲಿ ಒಂದಾದ ಸೇಂಟ್ ಮೇರಿ ಬೆಸಿಲಿಕಾದಲ್ಲಿ ಮಧ್ಯರಾತ್ರಿಯ ಸಾಮೂಹಿಕ ಪ್ರಾರ್ಥನೆಯ ಜೊತೆ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಕಬ್ಬನ್‌ ರಸ್ತೆಯ ಸೇಂಟ್‌ ಆಂಡ್ರ್ಯೂಸ್‌ ಚರ್ಚ್‌ನಲ್ಲಿ 'ಪೀಸ್ ಆನ್ ಅರ್ಥ್' ಎಂಬ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಚರ್ಚ್‌ಗಳಲ್ಲಿ ಬೈಬಲ್‌ ಪಠಣದ ಜತೆಗೆ ಏಸುವಿನ ಮಹಿಮೆಯ ಗೀತೆಗಳನ್ನು ಹಾಡಲಾಯಿತು.

ಶಿವಾಜಿನಗರದಲ್ಲಿರುವ ಸಂತ ಬೇಸಿಲಿಕಾ ಚರ್ಚನಲ್ಲಿ ಕ್ರಿಸ್‌ಮಸ್‌ ಅಂಗವಾಗಿ ಸೋಮವಾರ ರಾತ್ರಿ ಫಾದರ್ ಆರೋಗ್ಯ ದಾಸ್ ಅವರು ಬಾಲ ಯೇಸುವಿನ ಮೂರ್ತಿಯನ್ನು ಗೋದಲಿಯಲ್ಲಿಡಲು ತೆಗೆದುಕೊಂಡು ಹೋಗುತ್ತಿರುವುದು –ಪ್ರಜಾವಾಣಿ ಚಿತ್ರ/ ರಂಜು ಪಿ
ಕ್ರಿಸ್‌ಮಸ್‌ ಮುನ್ನಾದಿನವಾದ ಸೋಮವಾರ ನಗರದ ರಿಚ್ಮಂಡ್‌ ರಸ್ತೆಯ ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಬಾಲಯೇಸುವಿನ ಮೂರ್ತಿಯನ್ನು ಗೋದಲಿಗೆ ಹೊತ್ತು ತಂದ ಫಾದರ್ ಚಿತ್ರ: ಬಿ.ಎಚ್. ಶಿವಕುಮಾರ್
ಕ್ರಿಸ್‌ಮಸ್‌ ಸಂಭ್ರಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.